ಕುಂಬಳೆಯಲ್ಲಿ ಮೊಟ್ಟ ಮೊದಲ ಪ್ರವಾಸಿ ಯೋಜನೆ : ಕಿದೂರು ಪಕ್ಷಿ ಗ್ರಾಮ ನಿರ್ಮಾಣ ಅಂತಿಮ ಹಂತದಲ್ಲಿ

ಕುಂಬಳೆ: ನೂರಾರು ಮಂದಿ ಪರಿಸರಪ್ರೇಮಿಗಳು, ಪಕ್ಷಿ ವೀಕ್ಷಕರು ತಲುಪುವ ಕುಂಬಳೆ ಗ್ರಾಮ ಪಂಚಾಯತ್‌ನ ಮೊದಲ ಟೂರಿಸಂ ಯೋಜನೆಯಾದ ಕಿದೂರು ಪಕ್ಷಿ ಗ್ರಾಮದ ಡೋರ್ಮೆಟರಿಯ ನಿರ್ಮಾಣ ಅಂತಿಮ ಹಂತದಲ್ಲಿದೆ. ಈಗಾಗಲೇ 90 ಶೇ. ಕಾಮಗಾರಿ ಪೂರ್ಣಗೊಂಡ ಡೋರ್ಮೆಟರಿಯ ಉದ್ಘಾಟನೆ ಶೀಘ್ರ ನಡೆಯಲಿದೆ.

ಜೈವಿಕ ವೈವಿದ್ಯಗಳ ಉಗ್ರಾಣವೆಂದೇ ಕಿದೂರು ಗ್ರಾಮ ಪರಿಗಣಿಸಲ್ಪಟ್ಟಿದೆ. 174 ವ್ಯತ್ಯಸ್ಥ ತಳಿಗೊಳಪಟ್ಟ ಪಕ್ಷಿಗಳನ್ನು ಈಗಾಗಲೇ ಇಲ್ಲಿ ಪತ್ತೆಹಚ್ಚಲಾಗಿ ಇನ್ನಷ್ಟು ಹೆಚ್ಚಿನ ಪಕ್ಷಿಗಳನ್ನು ಪತ್ತೆಹಚ್ಚಲಿರುವ ವೀಕ್ಷಣೆ ನಡೆಯುತ್ತಿದೆ. ಸುಡುಬೇಸಿಗೆ ಯಲ್ಲೂ ಬತ್ತದ ಕಾಜೂರುಪಳ್ಳ ಪಕ್ಷಿ ಗ್ರಾಮದ ಪ್ರಧಾನ ಆಕರ್ಷಣಾ ಕೇಂದ್ರವಾಗಿದೆ. ಪಕ್ಷಿಗಳು ಈ ಪ್ರದೇಶದಲ್ಲಿ ಬೀಡು ಬಿಡುತ್ತಿವೆ.

ದೀರ್ಘಕಾಲದ ಬೇಡಿಕೆಯ ಫಲವಾಗಿ 2020ರಲ್ಲಿ ಡೋರ್ಮೆಟರಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ನಿರ್ಮಾಣ ಪೂರ್ತಿಗೊಳಿಸಲು ನಾಲ್ಕು ವರ್ಷಗಳೇ ಬೇಕಾಯಿತು. ಕಾಮಗಾರಿ ನಿಧಾನಗತಿಯಲ್ಲಿ ಸಾಗುವುದರ ವಿರುದ್ಧ ವ್ಯಾಪಕ ಪ್ರತಿಭಟನೆ ಕೇಳಿ ಬಂದಿತ್ತು. ಮಂಜೂರುಗೊಂಡ ಮೊತ್ತ ಯಥಾ ಸಮಯ ಲಭಿಸದಿರುವುದೇ ನಿರ್ಮಾಣ ಚಟುವಟಿಕೆಗೆ ಬಾಧಿಸಿದೆಯೆಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ.

ಅನ್ಯರಾಜ್ಯಗಳಿಂದ ಕೂಡಾ ಪಕ್ಷಿ ಗ್ರಾಮಕ್ಕೆ ತಲುಪುವ ಪಕ್ಷಿ ವೀಕ್ಷಕರು, ಸಂಶೋಕರು, ವಿದ್ಯಾರ್ಥಿಗಳು ಹಲವು ಕಾರ್ಯಕ್ರಮಗಳಲ್ಲಿ ಕಿದೂರು ಪಕ್ಷಿಗ್ರಾಮದಲ್ಲಿ ಹಮ್ಮಿಕೊಳ್ಳುತ್ತಿದ್ದಾರೆ. ಕುಂಬಳೆ ಗ್ರಾಮ ಪಂಚಾಯತ್ ಕೂಡಾ ಹಲವು ಕಾರ್ಯಕ್ರಮಗಳನ್ನು ಇಲ್ಲಿ ಸರಕಾರದ ಸಹಕಾರದೊಂದಿಗೆ ಹಮ್ಮಿ ಕೊಂಡಿದೆ. ಇಂತಹ ಕಾರ್ಯಕ್ರಮ ಗಳಿಗಾಗಿ ಇಲ್ಲಿ ಡೋರ್ಮೆಟರಿ ನಿರ್ಮಾ ಣಕ್ಕೆ ಚಾಲನೆ ನೀಡಲಾಗಿತ್ತು. ಇದಕ್ಕಾಗಿ ಕಾಸರಗೋಡು ಅಭಿವೃದ್ಧಿ ಯೋಜನೆ ಯಲ್ಲಿ ಒಳಪಡಿಸಿ 60 ಲಕ್ಷ ರೂ.ಗಳ ಯೋಜನೆ ಮಂಜೂರು ಮಾಡಲಾಗಿತ್ತು. ನಿರ್ಮಾಣ ಪೂರ್ಣಗೊಂಡ ಡೋ ರ್ಮೆಟರಿಯಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ವಾಸಕ್ಕಾಗಿ ಪ್ರತ್ಯೇಕ ಕೊಠಡಿಗಳು, ಸಭಾಂಗಣ, ಶೌಚಾಲಯ, ಅಡುಗೆ ಕೋಣೆ, ಕಚೇರಿ ಕೊಠಡಿ ಎಂಬಿವುಗಳನ್ನು ಮೊದಲ ಹಂತದಲ್ಲಿ ನಿರ್ಮಿಸಲಾಗಿದೆ. ನಿರ್ಮಿತಿ ಕೇಂದ್ರ ಇದರ ನಿರ್ಮಾಣ ಹೊಣೆಗಾರಿಕೆ ವಹಿ ಸಿತ್ತು. ಕಿದೂರಿನ ಪಕ್ಷಿಗ್ರಾಮ ಯೋಜನೆ ಸಾರ್ಥಕಗೊಳ್ಳುವುದರೊಂದಿಗೆ ಸಮೀಪದಲ್ಲೇ ನೆಲೆಗೊಂಡಿರುವ ಆರಿಕ್ಕಾಡಿ ಕೋಟೆ, ಅನಂತಪುರ ಸರೋವರ ಕ್ಷೇತ್ರ, ಶಿರಿಯಾ ಹೊಳೆ ಅಣೆಕಟ್ಟು ಮೊದಲಾದವುಗಳು ಟೂರಿಸಂ ಯೋಜನೆಯಲ್ಲಿ ಸ್ಥಾನ ಗಿಟ್ಟಿಸಲಿವೆ ಎಂದು ನಾಗರಿಕರು ನಿರೀಕ್ಷೆ ವ್ಯಕ್ತಪಡಿಸುತ್ತಿದ್ದಾರೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page