ಕುಂಬಳೆಯಲ್ಲಿ ರಸ್ತೆಗೆ ಬಿದ್ದ ಮರ: ತಪ್ಪಿದ ಭಾರೀ ದುರಂತ; ವಿದ್ಯುತ್ ವಿತರಣೆ ಮೊಟಕು

ಕುಂಬಳೆ: ಕುಂಬಳೆ ಪೇಟೆ ಸಮೀಪ ರಸ್ತೆಗೆ ಮರ ಮುರಿದು ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ನಡೆದಿದೆ. ಮರ ಬಿದ್ದ ಪರಿಣಾಮ ವಿದ್ಯುತ್ ಕಂಬವೂ ಮುರಿದು ಬಿದ್ದಿದ್ದು, ಇದರಿಂದ ಶಾಂತಿಪಳ್ಳ ಭಾಗದಲ್ಲಿ ವಿದ್ಯುತ್ ವಿತರಣೆಯೂ ಮೊಟಕುಗೊಂಡು ನಾಗರಿಕರು  ಸಮಸ್ಯೆ ಎದುರಿಸಬೇಕಾಗಿ ಬಂತು.

ನಿನ್ನೆ ಸಂಜೆ ೫.೪೫ರ ವೇಳೆ ಘಟನೆ ನಡೆದಿದೆ.  ಕುಂಬಳೆ-ಬದಿಯಡ್ಕ ರಸ್ತೆಯಲ್ಲಿ ಇಗರ್ಜಿ ಹಾಗೂ ಪೆಟ್ರೋಲ್ ಬಂಕ್ ಮಧ್ಯೆ ರಸ್ತೆ ಬದಿಯಲ್ಲಿದ್ದ ಮರ ಮುರಿದು ಬಿದ್ದಿದೆ. ಕಾಸರಗೋಡಿನಿಂದ ತಲುಪಿದ ಅಗ್ನಿಶಾಮಕದಳ ಹಾಗೂ ನಾಗರಿಕರು ಸೇರಿ  ಮರವನ್ನು ರಸ್ತೆಯಿಂದ ತೆರವುಗೊಳಿಸಿ ವಾಹನ ಸಂಚಾರಕ್ಕೆ ಸೌಕರ್ಯವೊದಗಿಸಿದರು.

RELATED NEWS

You cannot copy contents of this page