ಜೋಡುಕಲ್ಲಿನಲ್ಲಿ ಲೋಕೋಪಯೋಗಿ ಇಲಾಖೆಯ ಸ್ಥಳದಲ್ಲಿ ಸೇವಾ ಭಾರತಿಯ ಆಡಿಟೋರಿಯಂ-ಯೂತ್ ಲೀಗ್ ಆರೋಪ

ಉಪ್ಪಳ: ಜೋಡುಕಲ್ಲಿನಲ್ಲಿ  ಲೋ ಕೋಪಯೋಗಿ  ಹಾಗೂ ಕಂದಾಯ ಇಲಾಖೆಯ ಸ್ಥಳವನ್ನು ಅತಿಕ್ರಮಿಸಿ ಸೇವಾ ಭಾರತಿ ಟ್ರಸ್ಟ್ ನ ಹೆಸರಲ್ಲಿ ಆಡಿಟೋರಿಯಂ ನಿರ್ಮಿಸಿರುವುದಾಗಿ ಯೂತ್ ಲೀಗ್ ಆರೋಪಿಸಿದೆ. ಯೂತ್ ಲೀಗ್ ನೇತಾರನೂ ಜಿಲ್ಲಾ ಪಂಚಾಯತ್ ಸದಸ್ಯನಾದ ಅಸೀಸ್ ಕಳತ್ತೂರು,  ಸಿದ್ದಿಕ್ ದಂಡೆಗೋಳಿ, ಮಜೀದ್ ಪಚ್ಚಂಬಳ ಎಂಬಿವರು ಈ ಆರೋಪಹೊರಿಸಿದ್ದಾರೆ. ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಜೋಡುಕಲ್ಲಿನಲ್ಲಿ ಸರಕಾರಿ ಸ್ಥಳವನ್ನು ಅತಿಕ್ರಮಿಸಿ ಆಡಿಟೋರಿಯಂ ನಿರ್ಮಿಸಿರುವುದಾಗಿ ದೂರಲಾಗಿದೆ.

೨೦,೦೦೦ ಚದರ ಅಡಿ ವಿಸ್ತೀ ರ್ಣದ ಕಟ್ಟಡವನ್ನು ನಿರ್ಮಿಸಿರುವುದಾಗಿ ಯೂತ್ ಲೀಗ್ ನೇತಾರರು ಆರೋಪಿ ಸಿದ್ದಾರೆ. ಕಬ್ಬಿಣದ ಕಂಬಗಳನ್ನು ಸ್ಥಾಪಿಸಿ, ಶೀಟ್ ಅಳವಡಿಸಿ ಆಡಿಟೋರಿಯಂ ಮಾದರಿಯ ಕಟ್ಟಡ ನಿರ್ಮಿಸಲಾಗಿದೆ ಯೆಂದು ದೂರಿನಲ್ಲಿ  ತಿಳಿಸಲಾಗಿದೆ. ಸ್ಥಳ ಅತಿಕ್ರಮಣಕ್ಕೆ ಸಂಬಂಧಿಸಿ ಕಳೆದ ಜುಲೈಯಿಂದ ಸ್ಥಳೀಯ ನಿವಾಸಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಅಧಿಕಾ ರಿಗಳಿಗೆ ದೂರು ನೀಡಿದ್ದರೆಂದೂ ಯೂತ್ ಲೀಗ್ ನೇತಾರರು ತಿಳಿಸಿದ್ದಾರೆ.

ನಿರ್ಮಾಣ ಚಟುವಟಿಕೆಗಳಿಂದ ಹಿಂಜರಿಯುವುದಾಗಿ ನಿರ್ಮಾಣಕ್ಕೆ ನೇತೃತ್ವ ನೀಡಿದವರು ಪೊಲೀಸ್ ಠಾಣೆಗೆ ತಲುಪಿ   ಭರವಸೆ ನೀಡಿದ್ದರೂ ಬಳಿಕ ನಿರ್ಮಾಣ ಕೆಲಸವನ್ನು ಮುಂದುವರಿಸಿ ದ್ದಾರೆ. ಅಧಿಕಾರಿಗಳ ಹಾಗೂ ಪೊಲೀಸರ ಒತ್ತಾಸೆಯ ಮೇರೆಗೆ ನಿರ್ಮಾಣ ಕೆಲಸ  ಪೂರ್ತಿಗೊಳಿಸಿರುವುದಾಗಿ ಯೂತ್ ಲೀಗ್ ನೇತಾರರು ಆರೋಪಿಸಿದ್ದಾರೆ.

ಯೂತ್ ಲೀಗ್‌ನಿಂದ ಪಿಡಬ್ಲ್ಯುಡಿ ಎ.ಇ ಕಚೇರಿ ದಿಗ್ಬಂಧನ

ಲೋಕೋಪಯೋಗಿ ಇಲಾಖೆಯ ಸ್ಥಳವನ್ನು ಅತಿಕ್ರಮಿಸಿ ಆಡಿಟೋರಿಯಂ ನಿರ್ಮಿಸಿರುವುದಾಗಿ ಆರೋಪಿಸಿ  ಮುಸ್ಲಿಂ ಯೂತ್ ಲೀಗ್ ಪ್ರತಿಭಟನೆ ನಡೆಸಿದೆ. ಅನಧಿಕೃತ ವಾಗಿ ನಿರ್ಮಿಸಿದ ಕಟ್ಟಡವನ್ನು ತುರ್ತಾಗಿ ಮುರಿದು ತೆಗೆಯಬೇಕೆಂದೂ, ಅತಿಕ್ರಮಿಸಿದ ಸ್ಥಳದಲ್ಲಿ ಮುಂದೆ ಯಾವುದೇ ಚಟುವಟಿಕೆಗಳನ್ನು ನಡೆಸಕೂಡದೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗಿದೆ. ಯೂತ್ ಲೀಗ್ ಮಂಡಲ ಕಮಿಟಿ ನೇತೃತ್ವದಲ್ಲಿ ಮಂಜೇಶ್ವರ ಪಿಡಬ್ಲ್ಯುಡಿ ಅಸಿಸ್ಟೆಂಟ್ ಇಂಜಿನಿಯರ್‌ರ ಕಚೇರಿಯಲ್ಲಿ ದಿಗ್ಬಂಧನ ನಡೆಸಲಾಗಿದೆ. ಕಟ್ಟಡ ನಿರ್ಮಾಣದ ವಿರುದ್ಧ ಈ ಹಿಂದೆ ನೀಡಿದ ದೂರುಗಳಲ್ಲಿ ಯಾವುದೇ ಕ್ರಮ ಉಂಟಾಗಿಲ್ಲವೆಂದು ಆರೋಪಿಸಿ ಚಳವಳಿ ನಡೆಸಲಾಗಿದೆ. ಪ್ರತಿಭಟನೆ ಮಧ್ಯೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಯೂತ್ ಲೀಗ್ ನೇತಾರರೊಂದಿಗೆ ಚರ್ಚೆ ನಡೆಸಿದರು. ಈ ಮಧ್ಯೆ ಸ್ಥಳಕ್ಕೆ ತಲುಪಿದ ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟು ಆರೋಪವಿಧೇಯನಾದ ಬಿಜೆಪಿ ನೇತಾರ ಲೋಕೇಶ್ ನೋಂಡಾರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿರು ವುದಾಗಿ ಯೂತ್ ಲೀಗ್ ನೇತಾರರು ತಿಳಿಸಿದ್ದಾರೆ. ಯೂತ್ ಲೀಗ್ ಜಿಲ್ಲಾಧ್ಯಕ್ಷ ಅಸೀಸ್ ಕಳತ್ತೂರು,  ಉಪಾಧ್ಯಕ್ಷ ಎ. ಮುಕ್ತಾರ್, ಮಂಡಲ ಅಧ್ಯಕ್ಷ ಆಸಿಫ್ ಕಂದಲ್, ಪ್ರಧಾನ ಕಾರ್ಯದರ್ಶಿ ಮಜೀದ್ ಪಚ್ಚಂಬಳ, ಸಿದ್ದಿಕ್ ದಂಡೆಗೋಳಿ, ಕೋಶಾಧಿಕಾರಿ ಫಾರೂಕ್, ಸವಾದ್, ಮುಜೀಬ್ ಪೇರಾಲ್, ಹನೀಫ್ ಕುಂಜತ್ತೂರು, ರಿಯಾಸ್ ಪಚ್ಲಂಪಾರೆ, ಇರ್ಷಾದ್ ಕುಂಜತ್ತೂರು, ಸಮದ್ ಅರಿಮಲೆ, ನಿಸಾಂ ಕೊಡ್ಯಮ್ಮೆ, ನೌಫಲ್, ನಿಸಾರ್ ಬಾಯಾರು, ಜಸೀಲ್ ಹುಬ್ಬಳ್ಳಿ, ಇರ್ಷಾದ್, ಇರ್ಫಾನ್ ಮೊದಲಾದವರು ಪ್ರತಿಭಟನೆಗೆ ನೇತೃತ್ವ ನೀಡಿದರು. ಪ್ರತಿಭಟನೆಯನ್ನು ಮುಂದುವರಿಸುವುದಾಗಿಯೂ ಇವರು ತಿಳಿಸಿದ್ದಾರೆ.

ಕ್ರಮ ಕೈಗೊಳ್ಳುವುದಾಗಿ ಪಿಡಬ್ಲ್ಯುಡಿ ಅಧಿಕಾರಿಗಳಿಂದ ಭರವಸೆ

ಲೋಕೋಪಯೋಗಿ ಇಲಾಖೆಯ ಸ್ಥಳವನ್ನು ಅತಿಕ್ರಮಿಸಿ ನಿರ್ಮಿಸಿರುವು ದಾಗಿ ಆರೋಪ ಉಂಟಾದ ಕಟ್ಟಡದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮಂಜೇಶ್ವರ ಪಿಡಬ್ಲ್ಯುಡಿ ಅಸಿಸ್ಟೆಂಟ್ ಇಂಜಿನಿ ಯರ್ ತಿಳಿಸಿರುವುದಾಗಿ ಯೂತ್ ಲೀಗ್ ಪದಾಧಿಕಾರಿಗಳು ತಿಳಿಸಿದ್ದಾರೆ. ಅನಧಿಕೃತವಾಗಿ ನಿರ್ಮಿಸಿದ ಕಟ್ಟಡವನ್ನು ಮುರಿದು ತೆಗೆಯಲಿರುವ ಕ್ರಮವನ್ನು ಆರಂಭಿಸುವುದಾಗಿ ಅಸಿಸ್ಟೆಂಟ್ ಇಂಜಿನಿಯರ್ ಭರವಸೆ ನೀಡಿರುವುದಾಗಿ  ಅವರು ತಿಳಿಸಿದ್ದಾರೆ. ಅಗತ್ಯವಿದ್ದಲ್ಲಿ ಕಂದಾಯ ಅಧಿಕಾರಿ ಗಳ ಉಪಸ್ಥಿತಿಯಲ್ಲಿ  ಪೊಲೀಸ್ ಸಂರಕ್ಷಣೆಯನ್ನು  ಖಚಿತಪಡಿಸುವು ದಾಗಿ ಎ.ಇ ತಿಳಿಸಿರುವುದಾಗಿ ಯೂತ್ ಲೀಗ್ ಪದಾಧಿಕಾರಿಗಳು ತಿಳಿಸಿದ್ದಾರೆ. ಲೋಕೋಪಯೋಗಿ  ಇಲಾಖೆಯ ಭೂಮಿಯ ಹಾಗೂ ಕಂದಾಯ ಭೂಮಿಯ ಗಡಿ ಸಹಿತ ವಿಷಯಗಳನ್ನು ಪರಿಶೀಲಿಸಿದ ಬಳಿಕ  ಮುಂದಿನ ಕ್ರಮ ಕೈಗೊಳ್ಳಲಾಗು ವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.  ಸ್ಥಳ ಅತಿಕ್ರಮಣ ದೃಢಗೊಂಡರೆ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಯೂತ್ ಲೀಗ್ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಅನಧಿಕೃತ ಕಟ್ಟಡದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಟ್ಟಡದ ಮುಂದಿನ  ನಿರ್ಮಾಣ ಚಟುವಟಿಕೆಗಳನ್ನು ತಡೆಯಬೇಕೆಂದೂ   ಒತ್ತಾಯಿಸಲಾಗಿದೆ.

RELATED NEWS

You cannot copy contents of this page