ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ನಾಗರಹಾವು: ಆಚಾರ-ಅನುಷ್ಠಾನಗಳ ಪ್ರಕಾರ ಅಂತ್ಯಸಂಸ್ಕಾರ

ಕುಂಬಳೆ:  ಕುಂಬಳೆ   ಬಸ್ ನಿಲ್ದಾಣ ಸಮೀಪ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ನಾಗರ ಹಾವನ್ನು  ಆಚಾರ ಅನುಷ್ಠಾನಗಳ ಪ್ರಕಾರ ಅಂತ್ಯಸಂಸ್ಕಾರ ನಡೆಸಲಾಯಿತು. ಆದಿತ್ಯವಾರ ಸಂಜೆ ಇಲ್ಲಿನ ಹೊಸ ಬಸ್ ನಿಲ್ದಾಣ ಸಮೀಪ ನಾಗರಹಾವು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.  ವಿಷಯ ತಿಳಿದು  ಸೋಮವಾರದಂದು ಸ್ಥಳಕ್ಕೆ ತಲುಪಿದ ಪಂ. ಸದಸ್ಯ ಅಜಿತ್ ಕುಮಾರ್ ಆಚಾರ ಅನುಷ್ಠಾನಗಳ ಪ್ರಕಾರ ಸರ್ಪಸಂಸ್ಕಾರ ನಡೆಸಲು ವ್ಯವಸ್ಥೆ ಏರ್ಪಡಿಸಿದರು. ಇದಕ್ಕಾಗಿ  ಅರ್ಚಕರನ್ನು ಸ್ಥಳಕ್ಕೆ ಕರೆಸಿ  ಆಚಾರ ಅನುಷ್ಠಾನಗಳನ್ನು ಪೂರೈಸಿದ ಬಳಿಕ ಶ್ರೀಗಂಧದ ಕಟ್ಟಿಗೆಯಿಂದ  ಸಂಸ್ಕರಿಸಲಾಯಿತು. 10 ದಿನಗಳ ಬಳಿಕ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ  ಮೂರು ದಿನಗಳ ಕಾಲ ಅಂತಿಮ ಕ್ರಿಯೆಗಳಿರುವುದು.  ಸರ್ಪಗಳು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾ ದರೆ ಮನುಷ್ಯ ಸಾವಿಗೀಡಾದಾಗ ನಡೆಸಬೇಕಾದ   ಅಂತ್ಯಸಂಸ್ಕಾರ ಕಾರ್ಯಗಳನ್ನು ನೆರವೇರಿಸಬೇಕೆಂಬ ನಂಬಿಕೆ ಈ ಹಿಂದಿನಿಂದಲೂ ಜ್ಯಾರಿಯಲ್ಲಿದೆ ಯೆಂದು ಆಸ್ತಿಕರು ತಿಳಿಸುತ್ತಿದ್ದಾರೆ.  ಬಿಜೆಪಿ ನೇತಾರ ಸುಧಾಕರ ಕಾಮತ್ ಸರ್ಪ ಸಾವಿಗೀ ಡಾದ ವಿಷಯವನ್ನು ಅಜಿತ್‌ಕುಮಾರ್‌ಗೆ ತಿಳಿಸಿದ್ದರು.

You cannot copy contents of this page