ಕುಂಬಳೆಯಿಂದ ಕಳವಿಗೀಡಾದ ಬೈಕ್‌ಗಾಗಿ ಆರೋಪಿಗಳ ಸಹಾಯದಿಂದ ಶೋಧ ವಿಫಲ
ಕುಂಬಳೆ: ಕುಂಬಳಯಿಂದ ಕಳವಿಗೀಡಾದ ಬೈಕ್‌ನ ಪತ್ತೆಗಾಗಿ ಆರೋಪಿಗಳ ಸಹಾಯದಿಂದ ಶೋಧ ನಡೆಸಿದರೂ ಪತ್ತೆಹಚ್ಚಲಾಗಲಿಲ್ಲ. ಇದ ರಿಂದ ಕಸ್ಟಡಿಯಲ್ಲಿರುವ ಆರೋಪಿಗಳ ನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸಿದ ಬಳಿಕ ಮತ್ತೊಮ್ಮೆ ಕಸ್ಟಡಿಗೆ ತೆಗೆಯಲು ಪೊಲೀಸರು ಆಲೋಚಿಸುತ್ತಿದ್ದಾರೆ.
ಕಳೆದ ನವಂಬರ್ ೧ರಂದು ರಾತ್ರಿ ಕುಂಬಳೆ ಪೈ ಕಂಪೌಂಡ್‌ನಲ್ಲಿ ವಾಸಿಸುವ ಸಚಿನ್ ಎಂಬವರ ಬೈಕ್ ಕಳವಿಗೀಡಾಗಿತ್ತು. ಈ ಸಂಬಂಧ ಬಂಬ್ರಾಣ ನಿವಾಸಿ ರವೀಂದ್ರ ಡಬ್ಬಿ ರವಿ(32), ಮೊಗ್ರಾಲ್ ಮೈಮೂನ್‌ನಗರದ ಮುಹಮ್ಮದ್ ಮನ್ಸೂರ್ (27) ಎಂಬಿವರನ್ನು ಕುಂಬಳೆ ಪೊಲೀಸರು ನಾಲ್ಕು ತಿಂಗಳ ಬಳಿಕ ಸೆರೆಹಿಡಿದಿದ್ದರು. ಬಳಿಕ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳನ್ನು ಪೊಲೀಸರು ಇತ್ತೀಚೆಗೆ ಕಸ್ಟಡಿಗೆ ತೆಗೆದು ಬೈಕ್ ಪತ್ತೆಗೆ ಕ್ರಮ ಕೈಗೊಂಡಿದ್ದರು. ಕಳವಿಗೀಡಾದ ಬೈಕ್‌ನ್ನು ಕುಟ್ಟಿಪುರ ದಲ್ಲಿ ಮಾರಾಟಗೈದಿರುವುದಾಗಿ ಆರೋಪಿಗಳು ತಿಳಿಸಿದ್ದರು. ಇದರಂತೆ ಆರೋಪಿಗಳನ್ನು ಅಲ್ಲಿಗೆ ಕರೆದೊಯ್ದು ಶೋಧ ನಡೆಸಿದರೂ ಬೈಕ್ ಪತ್ತೆಯಾಗಲಿಲ್ಲ.
ಇದೇ ವೇಳೆ ಆರೋಪಿಗಳ ಕಸ್ಟಡಿ ಕಾಲಾವಧಿ ಇಂದು ಅವರನ್ನು ಅಪರಾಹ್ನ ಅಪರಾಹ್ನ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು. ಬೈಕ್‌ನ ಪತ್ತೆಗಾಗಿ ಅವರನ್ನು ಮತ್ತೆ ಕಸ್ಟಡಿಗೆ ತೆಗೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.