ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಉದ್ಘಾಟನೆ

ಕುಂಬಳೆ: ಶಾಲಾ ಕಲೋತ್ಸವ ಗಳ ಮೂಲಕ ಸಮಾಜದಲ್ಲಿ ಪ್ರತಿಭೆ ಗಳನ್ನು ಸೃಷ್ಟಿಸಲು, ಸೌಹಾರ್ದವನ್ನು ಬೆಳೆಸಲು ಕಾರಣವಾಗುತ್ತದೆ ಎಂದು ಶಾಸಕ ಎಕೆಎಂ ಅಶ್ರಫ್ ನುಡಿದರು. ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವವನ್ನು ಪೇರಾಲು ಜಿಜೆಬಿಎಸ್‌ನಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕುಂಬಳೆ ಪಂ. ಅಧ್ಯಕ್ಷೆ ಯು.ಪಿ. ತಾಹಿರ ಅಧ್ಯಕ್ಷತೆ ವಹಿಸಿದರು. ಸ್ವಾಗತಸಮಿತಿ ಸಂಚಾಲಕ ಹರ್ಷ ಸ್ವಾಗತಿಸಿದರು. ಎಇಒ ಶಿಧರ ಎಂ. ವರದಿ ಮಂಡಿಸಿದರು. ಎಣ್ಮಕಜೆ ಪಂ. ಅಧ್ಯಕ್ಷ ಸೋಮಶೇಖರ್ ಜೆ.ಎಸ್, ನಸೀಮ ಖಾಲಿದ್,  ಎಂ. ಸಬೂರ, ಬಿ.ಎ. ರಹ್‌ಮಾನ್ ಆರಿಕ್ಕಾಡಿ, ತಾಹಿರ ಶಂಸೀರ್, ಪಿಟಿಎ ಅಧ್ಯಕ್ಷ ಮುಹಮ್ಮದ್ ಪೇರಾಲ್, ಹಾದಿ ತಂಙಳ್ ಮಾತನಾಡಿದರು.

You cannot copy contents of this page