ಕುಂಬಳೆ ರೈಲ್ವೇ ಅಂಡರ್ ಪ್ಯಾಸೇಜ್‌ನಲ್ಲಿ ನೀರು: ಸಂಚಾರಕ್ಕೆ ಸಮಸ್ಯೆ

ಕುಂಬಳೆ: ಕುಂಬಳೆ ರೈಲ್ವೇ ಅಂಡರ್ ಪ್ಯಾಸೇಜ್‌ನಲ್ಲಿ ನೀರು ತುಂಬಿಕೊಂಡಿದ್ದು ಇದರಿಂದ ಕೊಯಿಪ್ಪಾಡಿ ಕಡಪ್ಪುರದ ಜನರಿಗೆ ಸಂಚಾರಕ್ಕೆ ಅಡಚಣೆ ಎದುರಾಗಿದೆ. ಬತ್ತೇರಿ, ಕೊಯಿಪ್ಪಾಡಿ ಭಾಗಕ್ಕೆ ತೆರಳಬೇಕಾದರೆ ಇದೇ ಅಂಡರ್ ಪ್ಯಾಸೇಜ್‌ನಲ್ಲಿ ಸಾಗಬೇಕು. ಆದರೆ ಈಗಾಗಲೇ ಸುರಿದ ಮಳೆಯ ನೀರು ಅದರಲ್ಲಿ ಕಟ್ಟಿ ನಿಂತಿದ್ದು, ಸಂಚಾರ ಸಮಸ್ಯೆ  ಎದುರಾಗಿದೆ. ನಿನ್ನೆ ಈ ಅಂಡರ್ ಪ್ಯಾಸೇಜ್‌ನೊಳಗೆ  ನೀರಿನಲ್ಲಿ ಕಾರೊಂದು ಸಿಲುಕಿಕೊಂಡಿತ್ತು. ರೈಲ್ವೇ ಅಂಡರ್ ಪ್ಯಾಸೇಜ್‌ನಲ್ಲಿ ಸಾಗಲು  ಸಾಧ್ಯವಾಗದಿದ್ದಲ್ಲಿ ಕುಂಬಳೆ ಪೇಟೆಗೆ ಬರುವವರು ರೈಲು ಹಳಿ ದಾಟಬೇಕಾಗಿ ಬರಲಿದೆ. ಇದು  ಅಪಾಯಕ್ಕೂ ಕಾರಣವಾಗಲಿದೆಯೆಂದು ನಾಗರಿಕರು ತಿಳಿಸುತ್ತಿದ್ದಾರೆ.

You cannot copy contents of this page