ಕುಸಿದು ಬಿದ್ದು ಗಲ್ಫ್ ಉದ್ಯೋಗಿ ನಿಧನ
ಕಾಸರಗೋಡು: ಪೈಕ ಅರ್ಲಡ್ಕದ ಒ.ಪಿ. ಹೌಸ್‌ನ ಗಲ್ಫ್ ಉದ್ಯೋಗಿ ಒ.ಪಿ. ಇಬ್ರಾಹಿಂ (44) ಎಂಬವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಇವರು ನಿನ್ನೆ ಮಧ್ಯಾಹ್ನ ಮನೆಯೊಳಗೆ ಕುಸಿದು ಬಿದ್ದಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ, ಜೀವ ರಕ್ಷಿಸಲಾಗಲಿಲ್ಲ. ಒ.ಪಿ. ಅಬೂಬಕ್ಕರ್ ಹಲೀಮಾ ದಂಪತಿ ಪುತ್ರನಾಗಿರುವ ಇಬ್ರಾಹಿಂ ಯು.ಎ.ಇಯಲ್ಲಿ ದುಡಿಯುತ್ತಿದ್ದರು. ನಾಲ್ಕು ತಿಂಗಳ ಹಿಂದೆ ಅವರು ಊರಿಗೆ ಹಿಂತಿರು ಗಿದ್ದರು. ಮೃತರು ಪತ್ನಿ ರಹಮ್ಮತ್ತು ನಿಸಾ, ಮಕ್ಕ ಳಾದ ಶರೋಸ್, ಫಾತಿಮತ್ ಶಾಸಿಲ್, ಸಹೋದರ-ಸಹೋದರಿಯರಾದ ರಿಯಾಸ್, ಅನ್ವರ್, ಫೌಸಿಯಾ, ಸುಹರಾ, ನಸೀಮಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.