ಕೂಡ್ಲು: ಕೋಟೆಯವರ ಯಾನೆ ಕೋಟೆಗಾರರ ಸೇವಾ ಸಂಘ ಮಹಾಸಭೆ

ಕಾಸರಗೋಡು: ಕೇರಳ ರಾಜ್ಯ  ಕೋಟೆಯವರ ಯಾನೆ ಕೋಟೆಗಾರರ ಸೇವಾ ಸಂಘ ಕೂಡ್ಲು ಮತ್ತು ಮಹಿಳಾ ಹಾಗೂ ಯುವಕ ಸಂಘಗಳ ವಾರ್ಷಿಕ ಮಹಾಸಭೆ ಇತ್ತೀಚೆಗೆ ಸಂಘದ ಅಧ್ಯಕ್ಷ ವಿಶ್ವನಾಥ ಕೋಟೆಕಣಿ ಅವರ ಅಧ್ಯಕ್ಷತೆಯಲ್ಲಿ  ಮೀಪುಗುರಿಯ ಶ್ರೀ ಪಂಜುರ್ಲಿ ಕಲ್ಲುರ್ಟಿ ತರವಾಡಿನಲ್ಲಿ ಜರಗಿತು. ಸಂಘದ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ಜಯಪ್ರಕಾಶ್ ಕುಂಬಳೆ, ಮಹಿಳಾ ಸಂಘದ ಅಧ್ಯಕ್ಷೆ ಗೀತಾ ರಶಾಂತ್, ಯುವಕ ಸಂಘದ ಅಧ್ಯಕ್ಷ ಮುರಳೀ ಪಾರೆಕಟ್ಟೆ ಉಪಸ್ಥಿತರಿದ್ದರು. ಕಾರ್ಯದರ್ಶಿ ಪಾಂಡುರಂಗ ವಿದ್ಯಾನಗರ ವರದಿ, ಲೆಕ್ಕಪತ್ರಗಳನ್ನು ದಿವಾಕರ ಮೀಪುಗುರಿ ಮಂಡಿಸಿದರು. ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ನೂತನ ಅಧ್ಯಕ್ಷರಾಗಿ ಕೆ. ವಿಶ್ವನಾಥ್ ಕೋಟೆಕಣಿ, ಕಾರ್ಯದರ್ಶಿಯಾಗಿ ಪಾಂಡುರಂಗ ವಿದ್ಯಾನಗರ, ಕೋಶಾಧಿಕಾರಿಯಾಗಿ ದಿವಾಕರ ಮೀಪುಗುರಿ ಆಯ್ಕೆಯಾದರು. ಮಹಿಳಾ ಸಂಘದ  ಅಧ್ಯಕ್ಷೆಯಾಗಿ ಗೀತಾ ರಶಾಂತ್, ಕಾರ್ಯದರ್ಶಿಯಾಗಿ  ವಿಯಲಕ್ಷ್ಮಿ, ಕೋಶಾಧಿಕಾರಿಯಾಗಿ ಪ್ರಪುಲ್ಯ ಆಯ್ಕೆಯಾದರು. ಯುವಕ ಸಂಘದ ಅಧ್ಯಕ್ಷರಾಗಿ ಮುರಳೀ ಪಾರೆಕಟ್ಟೆ, ಕಾರ್ಯದರ್ಶಿಯಾಗಿ ಮೋಹನ್ ರಾಜ್, ಕೋಶಾಧಿಕಾರಿಯಾಗಿ ಮೋದಕ್ ರಾಜ್ ಸೂರ್ಲು ಆಯ್ಕೆಯಾದರು. ಸತ್ಯನಾರಾಯಣ ರಾವ್, ಹರೀಶ್ ಕುಮಾರ್, ಶುಭ ಹಾರೈಸಿದರು. ಲಲಿತಾ ಕೇಶವ್, ಶೋಭಾ ಶೇಖರ್ ಪ್ರಾರ್ಥನೆ ಹಾಡಿದರು. ಮುರಳೀ ಪಾರೆಕಟ್ಟೆ ವಂದಿಸಿದರು. ಗಣೇಶ್ ಪ್ರಸಾದ್ ನಿರೂಪಿಸಿದರು.

You cannot copy contents of this page