ಕೆಎಸ್‌ಆರ್‌ಟಿಸಿ ಬಸ್- ಆಟೋರಿಕ್ಷಾ ಢಿಕ್ಕಿ: ಇಬ್ಬರು ಮೃತ್ಯು
ಪಾಲಕ್ಕಾಡ್: ಕಲ್ಲಿಕೋಟೆ ಪಾಲಕ್ಕಾಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಆಟೋರಿಕ್ಷಾ ಢಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ. ಪಾಲಕ್ಕಾಡ್ ತೃಕ್ಕಲ್ಲೂರು ನಿವಾಸಿಗಳಾದ ಆಟೋಚಾಲಕ ಅಸೀಸ್ (52), ಪ್ರಯಾಣಿಕ ಅಯ್ಯಪ್ಪನ್ ಕುಟ್ಟಿ (60) ಎಂಬಿವರು ಮೃತಪಟ್ಟವರಾಗಿದ್ದಾರೆ. ನಿನ್ನೆ ರಾತ್ರಿ ೮.೧೫ರ ವೇಳೆ ಮಣ್ಣಾರ್‌ಕಾಡ್ ತಚ್ಚಂಬಾರ ಎಂಬಲ್ಲಿ ಅಪಘಾತವುಂಟಾಗಿದೆ. ಕಲ್ಲಿಕೋಟೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಇದೇ ವೇಳೆ ಆಟೋ ಚಾಲಕ ಅಸೀಸ್‌ರ ಸಾವಿನ ವಿಷಯ ತಿಳಿದು ಸಂಬಂಧಿಕೆ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಅಸೀಸ್‌ರ ಮನೆಯಲ್ಲಿ ವಾಸಿಸುವ ಪತ್ನಿಯ ತಾಯಿಯ ಸಹೋದರಿ ನಫೀಸ ಎಂಬವರು ಮೃತಪಟ್ಟಿದ್ದಾರೆ. ಸಾವಿನ ಸುದ್ಧಿ ತಿಳಿದು ಪ್ರಜ್ಞೆ ತಪ್ಪಿ ಬಿದ್ದ ನಫೀಸರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.