ಕೆನಡಾದಲ್ಲಿ ನಾಪತ್ತೆಯಾಗಿದ್ದ ಕೇರಳೀಯ ಯುವಕ ಕಾರಿನೊಳಗೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕೊಚ್ಚಿ: ಕೆನಡಾದಲ್ಲಿ ನಾಪತ್ತೆಯಾಗಿದ್ದ ಕೇರಳೀಯನಾದ ಯುವಕ ಕಾರಿನೊಳಗೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮಲಯಾಟೂರ್ ನೀಲೇಶ್ವರ ನಿವಾಸಿ ಪುದುಶೇರಿ ಫಿನ್ರೋ ಆಂಟನಿ (39) ಸಾವಿಗೀಡಾದ ವ್ಯಕ್ತಿ. ಈ ತಿಂಗಳ ೫ರಿಂದ ಫಿನ್ರೋ ನಾಪತ್ತೆಯಾಗಿದ್ದರು. ಅವರ ಮೊಬೈಲ್ ಫೋನ್ ಮನೆಯಲ್ಲಿ ಪತ್ತೆಯಾಗಿತ್ತು.  ಅವರು ನಾಪತ್ತೆಯಾದ ಸುದ್ದಿಯನ್ನು ಕೆನಡಾ ಪೊಲೀಸರು ಬುಧವಾರ ಅಲ್ಲಿನ ಪತ್ರಿಕೆಗಳಲ್ಲಿ ಪ್ರಕಟಿಸಿದ್ದರು. ಅವರಿಗಾಗಿ ಹುಡುಕಾಟ ನಡೆಯುತ್ತಿರುವ ಮಧ್ಯೆ ನಿನ್ನೆ ಸಂಜೆ ಕಾರಿನೊಳಗೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಸಾವಿಗೆ ಕಾರಣವೇನೆಂಬ ಬಗ್ಗೆ ತಿಳಿದುಬಂದಿಲ್ಲ. 12 ವರ್ಷಗಳಿಂದ ಕೆನಡಾದಲ್ಲಿ ಉದ್ಯೋಗದಲ್ಲಿರುವ ಫಿನ್ರೋ ಇತ್ತೀಚೆಗಷ್ಟೇ ಅಲ್ಲಿ ಸ್ವಂತ ಮನೆ ನಿರ್ಮಿಸಿದ್ದರು. ದೀರ್ಘಕಾಲದಿಂದ ಉತ್ತಮ ಸ್ಥಿತಿಯಲ್ಲಿ ಜೀವಿಸುತ್ತಿದ್ದರು. ಆರು ತಿಂಗಳಿಂದ ಪತ್ನಿ ಹಾಗೂ ಇಬ್ಬರು ಮಕ್ಕಳು ಕೆನಡಾದಲ್ಲಿದ್ದಾರೆ.

RELATED NEWS

You cannot copy contents of this page