ಕೆಲವು ಡ್ರೈವಿಂಗ್ ಸ್ಕೂಲ್ಗಳು ಮಾಫಿಯಾ ತಂಡದ ಹಿಡಿತದಲ್ಲಿ
ಕಾಸರಗೋಡು: ಸರಕಾರ ಜ್ಯಾರಿಗೊಳಿಸಿರುವ ಸುಧಾರಣಾತ್ಮಕ ಡ್ರೈವಿಂಗ್ ಟೆಸ್ಟ್ ಕ್ರಮದ ವಿರುದ್ಧ ಕೆಲವು ಮಾಫಿಯಾ ತಂಡಗಳು ರಂಗಕ್ಕಿಳಿದು ಪ್ರತಿಭಟನೆಯಲ್ಲಿ ತೊಡಗಿವೆಯೆಂದೂ ಆದರೆ ಇಂತಹ ಸುಧಾರಣಾತ್ಮಕ ಕ್ರಮ ಗಳಿಂದ ಸರಕಾರ ಹಿಂದಕ್ಕೆ ಸರಿಯದೆಂದು ಸಾರಿಗೆ ಖಾತೆ ಸಚಿವ ಕೆ.ಬಿ. ಗಣೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ವಿಶೇಷ ವಾಗಿ ಮಲಪ್ಪುರಂ ಜಿಲ್ಲೆಯಲ್ಲೇ ಇಂತಹ ಡ್ರೈವಿಂಗ್ ಮಾಫಿಯಾ ತಂಡಗಳು ರಂU ಕ್ಕಿಳಿದು ಪ್ರತಿಭಟನೆಯಲ್ಲಿ ತೊಡಗಿವೆ. ಇಂತಹವರಿಗೆ ಮೋಟಾರು ವಾಹನ ಇಲಾಖೆಯ ಕೆಲವು ಅಧಿಕಾರಿಗಳೂ ಬೆಂಬಲವಾಗಿ ನಿಂತಿದ್ದಾರೆ. ಇಂತಹ ಅಧಿಕಾರಿಗಳಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತವರೂ ಒಳಗೊಂಡಿ ದ್ದಾರೆ. ಭ್ರಷ್ಟಾಚಾರಿ ಅಧಿಕಾರಿಗಳ ವಿರುದ್ಧ ಕೈಗೊಳ್ಳಲಾಗುತ್ತಿರುವ ಕಠಿಣ ಕ್ರಮಗಳು ಇನ್ನೂ ಮುಂದುವರಿಯಲಿದೆ. ಇಂತಹ ಅಧಿಕಾರಿಗಳು ನಕಲಿ ರಶೀದಿ ತಯಾರಿಸಿ ತೆರಿಗೆ ವಂಚನೆ ನಡೆಸುತ್ತಿದ್ದಾರೆಂದೂ ಸಚಿವರು ಹೇಳಿದ್ದಾರೆ.
ಇದೇ ವೇಳೆ ಡ್ರೈವಿಂಗ್ ಟೆಸ್ಟ್, ಸುಧಾರಣಾ ಕ್ರಮವನ್ನು ಪ್ರತಿಭಟಿಸಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಡ್ರೈವಿಂಗ್ ಸ್ಕೂಲ್ ಯೂನಿಯನ್ಗಳು ಪ್ರತಿಭಟನೆಯೊಂದಿಗೆ ರಂಗಕ್ಕಿಳಿದಿವೆ. ಇದರಿಂದಾಗಿ ರಾಜ್ಯದ ಹಲವೆಡೆಗಳಲ್ಲಿ ಇಂದು ನಡೆಯ ಬೇಕಾಗಿದ್ದ ಡ್ರೈವಿಂಗ್ ಟೆಸ್ಟ್ಗಳು ನಿಲುಗಡೆಗೊಂಡಿವೆ.
ದೈನಂದಿನ ಡ್ರೈವಿಂಗ್ ಟೆಸ್ಟ್ ಸಂಖ್ಯೆಯನ್ನು ಸಾರಿಗೆ ಸಚಿವರು 50ರಿಂದ 60೦ಕ್ಕೇರಿಸಿದರೂ ಅದರ ಅಧಿಕೃತ ಅಧಿಸೂಚನೆ ಇನ್ನೂ ಹೊರಬಂದಿಲ್ಲ. ಇದು ಇನ್ನೊಂದೆಡೆ ಭಾರೀ ಗೊಂದಲಕ್ಕೂ ದಾರಿ ಮಾಡಿಕೊಟ್ಟಿದೆ.