ಕೇಂದ್ರ -ಕೇರಳ ವಿ.ವಿಯಲ್ಲಿ ಪಿಜಿ ಪ್ರವೇಶಕ್ಕೆ ನೋಂದಾವಣೆ ಆರಂಭ

ಕಾಸರಗೋಡು: ಕೇರಳ- ಕೇಂದ್ರ ವಿವಿಯಲ್ಲಿರುವ ವಿವಿಧ ಸ್ನಾತಕೋತ್ತರ  ಪದವಿ ಕೋರ್ಸ್‌ಗಳ ಪ್ರವೇಶಾತಿಗೆ ನೋಂದಾವಣೆ ಆರಂಭಗೊಂಡಿದೆ. ಜೂನ್ 2ರವರೆಗೆ ವಿವಿಯ ವೆಬ್‌ಸೈಟ್ ಸಂದರ್ಶಿಸಿ ನೋಂದಾಯಿಸಬಹುದು.

ದೇಶದ ವಿವಿಧ ವಿಶ್ವವಿದ್ಯಾಲಯಗಳಿಗೆ, ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೇಶನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ನಡೆಸಿದ ಸಾರ್ವಜನಿಕ ಪ್ರವೇಶ ಪರೀಕ್ಷೆ (ಸಿಯುಇಟಿ- ಪಿಜಿ)ಯಲ್ಲಿ ಭಾಗವಹಿಸಿದವರು ನೋಂದಾಯಿಸಬೇಕಾಗಿದೆ. ನೋಂದಾಯಿಸಬೇಕಾಗಿರುವುದು. ಜೂನ್ 10ರಂದು ರ‍್ಯಾಂಕ್ ಪ್ರಕಟಿಸಲಾಗಿದೆ. ನೋಂದಾಯಿತ ವಿದ್ಯಾರ್ಥಿಗಳಿಗೆ ಅಂದೇ ಇ-ಮೇಲ್ ಮೂಲಕ ಸೂಚನೆ ಲಭಿಸುವುದು. ಆಸಕ್ತರು ಜೂನ್ 12ರ ಒಳಗೆ ಇ-ಮೇಲ್ ಖಚಿತತೆ ನಡೆಸಬೇಕು. ಜೂನ್ 16ರಿಂದ 18ರವರೆಗೆ ಮೊದಲ ಹಂತದ ಪ್ರವೇಶ ನಡೆಯಲಿದೆ. ಜುಲೈ ೨ರಿಂದ ತರಗತಿಗಳು ಆರಂಭಗೊಳ್ಳಲಿದೆ. 26 ಸ್ನಾತಕೋತ್ತರ ಪ್ರೋಗ್ರಾಂಗಳನ್ನು ವಿವಿಯಲ್ಲಿ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page