ಕೇರಳಕ್ಕೆ ಇನ್ನೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಾಧ್ಯತೆ

ಪಾಲಕ್ಕಾಡ್: ಕೇರಳಕ್ಕೆ ಮೂರನೇ ವಂದೇ ಭಾರತ್ ರೈಲುಗಾಡಿ ಶೀಘ್ರ ಲಭಿಸುವ ಸಾಧ್ಯತೆ ಇದೆ. ಆದರೆ ಈ ರೈಲು ಪ್ರಯಾಣ ಹೊರಡುವುದು ಅಥವಾ ಕೊನೆಗೊಳ್ಳುವುದು ಕೇರಳದಲ್ಲಲ್ಲ. ಮಂಗಳೂರು-ಕೊಯಂಬ ತ್ತೂರು ಮಧ್ಯೆ ಈ ರೈಲು ಸಂಚರಿಸ ಲಿದೆಯೆಂದು ಹೇಳಲಾಗತ್ತಿದೆ. ಈ ರೈಲು ಆರಂಭಗೊಂಡರೆ ಕೇರಳದಲ್ಲಿ ಕಾಸರಗೋಡು,  ಕಣ್ಣೂರು, ಕಲ್ಲಿಕೋಟೆ, ಮಲಪ್ಪುರಂ, ಪಾಲಕ್ಕಾಡ್ ಎಂಬೀ ಜಿಲ್ಲೆಗಳ ಮೂಲಕ ಸಂಚರಿಸಲಿದೆ. ಇದು ಮಲಬಾರ್ ಪ್ರದೇಶದ ಪ್ರಯಾಣಕರಿಗೆ ಭಾರೀ ಪ್ರಯೋಜನಕಾರಿಯಾಗಲಿದೆ. ಪ್ರಸ್ತುತ ಕೇರಳದಲ್ಲಿ ಎgಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸುತ್ತಿದೆ.  ತಿರುವನಂತಪುರ-ಕಾಸರಗೋಡು ವಂದೇ ಭಾರತ್, ಮಂಗಳೂರು-ತಿರುವನಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಇದೀಗ ಸಂಚರಿಸುತ್ತಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನ ಹಾಗೂ ರೈಲ್ವೇಗೆ ಉತ್ತಮ ಆದಾಯವೂ ಲಭಿಸುತ್ತಿದೆ. ಇದರಿಂದ ಇನ್ನೊಂದು  ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಂಜೂರು ಮಾಡಬೇಕೆಂಬ  ಬೇಡಿಕೆ ತೀವ್ರಗೊಂಡಿದೆ.

RELATED NEWS

You cannot copy contents of this page