ಕೇರಳದಲ್ಲ್ಲಿ ಮಾವೋವಾದಿಗಳು ಠಿಕಾಣಿ ಹೂಡುವ ಸಾಧ್ಯತೆ-ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ
ಕಾಸರಗೋಡು: ಉತ್ತರ ಭಾರತದಲ್ಲಿ ಮಾವೋವಾದಿ ನೇತಾರರು ಮತ್ತು ಅದರ ಸದಸ್ಯರುಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಆರಂಭಿಸಿರುವ ಹಿನ್ನೆಲೆಯಲ್ಲಿ ಮಾವೋವಾದಿಗಳು ಅಲ್ಲಿಂದ ತಪ್ಪಿಸಿಕೊಂಡು ಕೇರಳದ ಗುಪ್ತಕೇಂದ್ರಗಳಲ್ಲಿ ಠಿಕಾಣಿ ಹೂಡುವ ಸಾಧ್ಯತೆ ಇದೆಯೆಂದು ಕೇಂದ್ರ ಗುಪ್ತಚರ ವಿಭಾಗ ಮುನ್ನೆಚ್ಚರಿಕೆ ನೀಡಿದೆ.
ಇತರ ರಾಜ್ಯಗಳ ವಲಸೆ ಕಾರ್ಮಿಕರ ಸೋಗಿನಲ್ಲಿ ಮಾವೋವಾದಿಗಳು ಸಶಸ್ತ್ರಧಾರಿಗಳಾಗಿ ಕೇರಳದಲ್ಲಿ ಬಂದು ನೆಲೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ವಿಭಾಗ ನೀಡಿರುವ ಮುನ್ನೆಚ್ಚರಿಕೆಯಲ್ಲಿ ತಿಳಿಸಲಾಗಿದೆ. ಮಾವೋವಾದಿಗಳ ಪ್ರಬಲ ಕೇಂದ್ರವಾಗಿರುವ ಛತ್ತೀಸ್ ಗಡ್, ಝಾರ್ಖಂಡ್ ಮತ್ತು ಒಡಿಶಾ ದಲ್ಲಿ ಮಾವೋವಾದಿಗಳ ಭೇಟೆ ಕಾರ್ಯಾಚರಣೆಯನ್ನು ಪೊಲೀಸ್ ಮತ್ತು ಮಾವೋವಾದಿ ನಿಗ್ರಹ ಪಡೆ ಇತ್ತೀಚೆಗಿನಿಂದ ಇನ್ನಷ್ಟು ತೀವ್ರಗೊಳಿ ಸಿದೆ. ಇಂತಹ ಕಾರ್ಯಾಚರಣೆಯಲ್ಲಿ ಹಿರಿಯ ಮಾವೋವಾದಿ ನಾಯಕ ಚಲಪತಿ ಸೇರಿದಂತೆ ಹಲವರು ಪೊಲೀ ಸರ ಗುಂಡೇಟಿಗೆ ಬಲಿಯಾಗಿದ್ದಾರೆ. ಈ ವರ್ಷ ಮಾತ್ರವಾಗಿ ಛತ್ತೀಸ್‌ಗಡದಲ್ಲಿ ನಲ್ವತ್ತರಷ್ಟು ಮಾವೋವಾದಿಗಳು ಪೊಲೀಸರ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾರೆ. ಸಿಪಿಐ ಮಾವೋಯಿಸ್ಟ್ ಕೇಂದ್ರ ಸಮಿತಿ ಸದಸ್ಯರು ಹಾಗೂ ಮಾವೋವಾದಿಯ ಸಶಸ್ತ್ರ ವಿಭಾಗವಾದ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ)ಯ ಕೆಲವು ಸದಸ್ಯರು ಮಾತ್ರವೇ ಈಗ ಬಾಕಿ ಉಳಿದುಕೊಂ ಡಿದ್ದಾರೆ. ಅವರು ಈಗ ತಮ್ಮ ಪ್ರಾಣ ಉಳಿಸಿಕೊಳ್ಳಲು ಹಾಗೂ ತಮ್ಮ ಸಂಘಟನೆಯ ಕಾರ್ಯಾಚರಣೆಗಳನ್ನು ಮುಂದುವರಿಸಲು ಉತ್ತರ ಭಾರತದ ರಾಜ್ಯಗಳಿಂದ ಕೇರಳಕ್ಕೆ ಪಲಾಯನಗೈದು ವಲಸೆ ಕಾರ್ಮಿಕರ ವೇಷದಲ್ಲಿ ಕೇರಳದ ವಿವಿಧ ಜಿಲ್ಲೆಗಳಲ್ಲಿ ನೆಲೆಯೂರಿರುವ ಸಾಧ್ಯತೆ ಇದೆ.
ಮಾವೋವಾದಿಗಳ ಪ್ರಬಲ ವಿಭಾಗವಾದ ಸೆಂಟ್ರಲ್ ರೀಜ್ಯನಲ್ ಬ್ಯೂರೋ ದಟ್ಟಾರಣ್ಯಗಳಲ್ಲೇ ಬೀಡು ಬಿಟ್ಟು ಅಲ್ಲಿಂದಲೇ ತಮ್ಮ ಭೂಗತ ಚಟುವಟಿಕೆ ನಡೆಸುತ್ತಿದೆ. ಮಾವೋವಾ ದಿಗಳ ವಿರುದ್ಧ ಕೇಂದ್ರ ಸರಕಾರ ತನ್ನ ನಿಲುವುಗಳನ್ನು ಇನ್ನಷ್ಟು ಬಿಗುಗೊಳಿ ಸಿರುವುದರಿಂದಾಗಿ ದಟ್ಟಾರಣ್ಯಗಳಲ್ಲಿ ಪೊಲೀಸರು ಮತ್ತು ನಕ್ಸಲ್ ನಿಗ್ರಹಪಡೆ ಈಗ ಜಂಟಿ ಕಾರ್ಯಾಚರಣೆ ಆರಂಭಿಸಿದೆ. ಇದರಂತೆ ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ ದಟ್ಟಾರಣ್ಯಗಳಲ್ಲಿ ಈಗ ಇಂತಹ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಮಾವೋವಾದಿ ನೇತಾರರನ್ನೆಲ್ಲಾ ಹುಡುಕಿ ಅವರನ್ನು ದಸ್ತಗಿರಿ ಅಥವಾ ಗುಂಡಿಕ್ಕಿ ಹತ್ಯೆಗೈಯ್ಯುವ ಪೊಲೀಸ್ ಕಾರ್ಯಾಚರಣೆಯನ್ನು ಈಗ ಇನ್ನಷ್ಟು ತೀವ್ರಗೊಳಿಸಲಾಗಿದೆ. ಇಂತಹ ಕಾರ್ಯಾಚರಣೆಗಳಿಂದ ಹೆದರಿ ಕಂಗಾಲಾದ ಹಲವು ಮಾವೋ ವಾದಿಗಳು ಕೆಲವು ದಿನಗಳ ಹಿಂದೆ ಕರ್ನಾಟಕ ಪೊಲೀಸರ ಮುಂದೆ ಶರಣಾಗಿದ್ದರು. ಇನ್ನು ಬಾಕಿ ಉಳಿದಿರುವ ಮಾವೋವಾದಿ ನೇತಾರರು ಕೇರಳದಲ್ಲಿ ತಲೆಮರೆಸಿ ಕೊಂಡು ಜೀವಿಸಿರಬಹುದೆಂಬ ಮಾಹಿತಿಯನ್ನು ಕೇಂದ್ರ ಗುಪ್ತಚರ ವಿಭಾಗ ನೀಡಿರುವ ಹಿನ್ನೆಲೆಯಲ್ಲಿ ಅವರ ಪತ್ತೆಗಾಗಿ ಕೇರಳ ಪೊಲೀಸರೂ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.