ಕೇರಳದ್ದು ಪರಾಜಯಗೊಂಡ ಅಭಿವೃದ್ಧಿ ಮಾದರಿ-ಎಂ.ಎಲ್. ಅಶ್ವಿನಿ
ಕಾಸರಗೋಡು: ಕಾಸರಗೋಡು ಜಿಲ್ಲೆಯ ಮುಳಿಯಾರು ಪಂಚಾಯತ್ ಎಂಡೋಸಲ್ಫಾನ್ ಪುನರ್ವಸತಿ ಗ್ರಾಮ ಹಾಗೂ ೧೨ ವರ್ಷದ ಹಿಂದೆಯೇ ನಿರ್ಮಾಣ ಕೆಲಸ ಆರಂಭಗೊಂಡರೂ ಈತನಕ ಪೂರ್ಣಗೊಳ್ಳದೇ ಇರುವುದು ಕೇರಳದ ಪರಾಜಯಗೊಂಡ ಅಭಿವೃದ್ಧಿ ಮಾದರಿಯಾಗಿದೆಯೆಂದು ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಹೇಳಿದ್ದಾರೆ.
ಮಲ್ಲದಲ್ಲಿ ನಡೆದ ಎನ್‌ಡಿಎ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗ ವಹಿಸಿ ಅವರು ಮಾತನಾಡು ತ್ತಿದ್ದರು. ೨೫ ಎಕ್ರೆ ಪ್ರದೇಶದಲ್ಲಿ ೪೫ ಕೋಟಿ ರೂ. ವೆಚ್ಚದಲ್ಲಿ ಎಂಡೋಸಲ್ಫಾನ್ ಪುನರ್ವಸತಿ ಗ್ರಾಮದ ಮೊದಲ ಹಂತದ ನಿರ್ಮಾಣ ಕೆಲಸ ಪೂರ್ಣಗೊಂ ಡರೂ ಅದರ ಪ್ರಯೋಜನ ಎಂಡೋಸಲ್ಫಾನ್ ಸಂತ್ರಸ್ತರಿಗೆ ಲಭಿಸುವಂತೆ ಮಾಡುವ ಯಾವುದೇ ಕ್ರಮ ಈತನಕ ಉಂಟಾಗಿಲ್ಲ.
ಇದೇ ರೀತಿ ಉಕ್ಕಿನಡ್ಕದಲ್ಲಿ ವೈದ್ಯ ಕೀಯ ಕಾಲೇಜು ಕಟ್ಟಡದ ನಿರ್ಮಾಣ ಕೆಲಸ ೧೨ ವರ್ಷಗಳ ಹಿಂದೆಯೇ ಆರಂ ಭಗೊಂಡರೂ ಅದೂ ಈತನಕ ಪೂರ್ಣಗೊಂಡಿಲ್ಲ. ಯುವತಿ-ಯುವ ಕರಿಗೆ ಉನ್ನತ ಶಿಕ್ಷಣಕ್ಕಾಗಲೀ, ಉದ್ಯೋಗಕ್ಕಾಗಲೀ ಜಿಲ್ಲೆಯಲ್ಲಿ ಅವಕಾಶ ಲಭಿಸುತ್ತಿಲ್ಲ. ಚೀಮೇನಿ ಕೈಗಾರಿಕಾ ಉದ್ಯಾನದ ನಿರ್ಮಾಣ ಕೆಲಸ ಕೇವಲ ಸುತ್ತುಗೋಡೆ ನಿರ್ಮಾಣದಲ್ಲಿ ಮಾತ್ರವೇ ಸೀಮಿತಗೊಂಡಿದೆ.
ಎಡರಂಗ ಮತ್ತು ಯುಡಿಎಫ್‌ನ ಅಭಿವೃದ್ಧಿ ಯೋಜನೆಗಳೆಲ್ಲವೂ ಕೇವಲ ಭರವಸೆಗಳಲ್ಲಿ ಮಾತ್ರವೇ ಸೀಮಿತಗೊಳ್ಳುತ್ತಿದೆ. ಆದರೆ ಕಳೆದ ೧೦ವರ್ಷದಿಂದ ಕೇಂದ್ರದ ಮೋದಿ ಸರಕಾರ ಜ್ಯಾರಿಗೆ ತಂದ ಅಭಿವೃದ್ಧಿ ಯೋಜನೆಗಳಿಂದ ಕೇರಳದಲ್ಲಿ ಭಾರೀ ಬದಲಾವಣೆ ಉಂಟಾಗಿದೆಯಂದೂ ಅಶ್ವಿನಿ ಹೇಳಿದ್ದಾರೆ. ಮುಳಿಯಾರು ಮಂಡಲ ಅಧ್ಯಕ್ಷ ಮಹೇಶ್ ಗೋಪಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ದೀಪಕ್ ಕುಮಾರ್ ಪಳ್ಳಂಜಿ, ಜಯಕುಮಾರ್ ಮಾನಡ್ಕ, ಸುಕುಮಾರನ್ ಕಾಲಿಕಡವು, ಅನನ್ಯ, ರಜನಿ ಸೇರಿದಂತೆ ಹಲವರು ಭಾಗವಹಿಸಿದರು.