ಕೇವಲ ನೋಟದ ವಸ್ತುವಾಗುತ್ತಿರುವ ಉದ್ಯೋಗ ವಿನಿಮಯ ಕೇಂದ್ರ: ಕೆಲಸಕ್ಕಾಗಿ ಹೆಸರು ನೋಂದಾಯಿಸಿದ್ದು 30 ಲಕ್ಷ ನಿರುದ್ಯೋಗಿಗಳು
ಕಾಸರಗೋಡು: ರಾಜ್ಯದ ಉದ್ಯೋಗ ವಿನಿಮಯ ಕೇಂದ್ರಗಳು ಇದೀಗ ಕೇವಲ ಒಂದು ನೋಟದ ವಸ್ತುವಾಗಿ ಮಾರ್ಪಡತೊಡಗಿದೆ. ಒಟ್ಟು 30 ಲಕ್ಷದಷ್ಟು ನಿರುದ್ಯೋಗಿ ಗಳು ರಾಜ್ಯದ ವಿವಿಧ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿ ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ.
2021ರಿಂದ 2024 ನವಂಬರ್ ತನಕದ ಅವಧಿಯಲ್ಲಿ ರಾಜ್ಯದಲ್ಲಿ 47,390 ಮಂದಿಗಷ್ಟೇ ಉದ್ಯೋಗ ವಿನಿಮಯ ಕೇಂದ್ರದ ಮೂಲಕ ನೇಮಕಾತಿ ಲಭಿಸಿದೆ. ಅದೂ ಕೇವಲ ಆರು ತಿಂಗಳ ಸೀಮಿತ ಅವಧಿಗಾ ಗಿರುವ ನೇಮಕಾತಿಯಾಗಿದೆ. ಖಾಯಂ ನೇಮಕಾತಿಯಂತೂ ಲಭಿಸುವುದಿಲ್ಲ. ಹಾಗೆ ನಡೆಯಬೇ ಕಾಗಿದ್ದಲ್ಲಿ ಅದಕ್ಕೆ ಪಿಎಸ್‌ಸಿ ಪರೀಕ್ಷೆಗೆ ಬರೆದು ರ‍್ಯಾಂಕ್ ಪಟ್ಟಿಯಲ್ಲಿ ಹೆಸರು ಬರಬೇಕಾಗಿದೆ.
ರಾಜ್ಯದಲ್ಲಿ ಪ್ರತೀ ವರ್ಷ ಸರಾಸರಿ 33,000 ದಷ್ಟು ಸರಕಾರಿ ಹುದ್ದೆಗಳು ತೆರವು ಬೀಳುತ್ತಿದ್ದರೂ ಸರಾಸರಿ ನೇಮಕಾತಿ ನಡೆಯುವು ದಂತೂ ಕೇವಲ 3000 ಹುದ್ದೆಗಳಿಗೆ ಮಾತ್ರವೇ ಆಗಿದೆ. ಉದ್ಯೋಗ ವಿನಿಮಯ ಕೇಂದ್ರದ ಮೂಲಕ ಖಾಯಂ ನೇಮಕಾತಿಯಂತೂ ಲಭಿಸುವುದಿಲ್ಲ. ಉದ್ಯೋಗ ವಿನಿಮಯ ಕೇಂದ್ರದ ಮೂಲಕ ಪಾರ್ಟ್ ಟೈಂ ಹುದ್ದೆಗಾಗಿ ನಡೆಸುವ ನೇಮಕಾತಿ ಕ್ರಮವನ್ನು ಹೊರತುಪಡಿಸುವ ಕ್ರಮದ ಲ್ಲೂ ಸರಕಾರ ಈಗ ತೊಡಗಿದೆ ಎನ್ನಲಾಗಿದೆ. ಸರಕಾರ ವೇತನ ನೀಡುವ ತಾತ್ಕಾಲಿಕ ಹುದ್ದೆಗಳಿಗೆ ಉದ್ಯೋಗ ವಿನಿಮಯ ಕೇಂದ್ರಗಳ ಮೂಲಕ ಮಾತ್ರವೇ ನೇಮಕಾತಿ ನಡೆಸಬೇಕೆಂದು ನಿರ್ದೇಶಿಸಿ ರಾಜ್ಯ ಸರಕಾರ 2004ರಲ್ಲೇ ಆದೇಶ ಹೊರಡಿಸಿತ್ತು. ಆದರೆ ಅಂತಹ ಕ್ರಮ ಅನುಸರಿಸದೆ ಆಡಳಿತ ಪಕ್ಷಗಳು ಆಗ್ರಹಿಸುವವರಿಗೆ ಮಾತ್ರವೇ ಹಿಂಬಾಗಿಲ ನೇಮಕಾತಿ ನಡೆಸುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಇದರಿಂದಾಗಿ ಅರ್ಹರಿಗೆ ಕೆಲಸ ಲಭಿಸದಂತಾಗಿದೆ.