ಕೈಕಂಬದ ಕ್ಲಿನಿಕ್ನಿಂದ 45,000ರೂ. ಕಳವು


ಮಂಜೇಶ್ವರ: ಉಪ್ಪಳದ ಕೈಕಂಬದಲ್ಲಿ ಕಾರ್ಯಾಚರಿಸುತ್ತಿರುವ ಇರಾನಿ ಕ್ಲಿನಿಕ್ನಿಂದ 45,000 ರೂ. ಕಳವುಗೈದ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಮಾರ್ಚ್ 27ರಂದು ಸಂಜೆ 3ರಿಂದ 29ರ ರಾತ್ರಿ 8.30ರ ಮಧ್ಯೆ ಕಳವು ನಡೆದಿರಬೇಕೆಂದು ಅಂದಾಜಿಸಲಾಗಿದೆ. ಬೀಗ ಮುರಿದು ಒಳ ನುಗ್ಗಿದ ಕಳ್ಳರು ಡ್ರವರ್ನಲ್ಲಿದ್ದ ಹಣವನ್ನು ದೋಚಿದ್ದಾರೆ. ಕೈಕಂಬದ ಮೊಹಮ್ಮದ್ ಸಮೀಪ್ ಎಂಬವರ ಪತ್ನಿ ಕೆ.ಪಿ. ಶಬನಂ ನೀಡಿದ ದೂರಿನಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

You cannot copy contents of this page