ಕೊಚ್ಚಿಯಲ್ಲಿ ಪೀಠೋಪಕರಣ ಅಂಗಡಿ ಬೆಂಕಿಗಾಹುತಿ

ಕೊಚ್ಚಿ: ಕೊಚ್ಚಿ ಟೌನ್ ಹಾಲ್ ಸಮೀಪದ ಪೀಠೋಪಕರಣ ಮಾರಾಟದಂಗಡಿಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ.  ಇಂದು ಮುಂಜಾನೆ ೩ ಗಂಟೆಗೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕದಳ ತಲುಪಿ ಗಂಟೆಗಳ ಕಾಲ ನಡೆಸಿದ ಪ್ರಯತ್ನದಲ್ಲಿ ಬೆಂಕಿಯನ್ನು ನಿಯಂತ್ರಣ ವಿಧೇಯಗೊಳಿಸಲಾಗಿದೆ. ಹಳೆಯ ಕುರ್ಚಿಗಳನ್ನು ದುರಸ್ತಿಪಡಿಸಿ ಮಾರಾಟಮಾಡುವ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.  ಮುಂಜಾನೆ ಪತ್ರಿಕೆ ವಿತರಿಸುವ ವ್ಯಕ್ತಿ ಬೆಂಕಿ ತಗಲಿದ ವಿಷಯವನ್ನು ಅಗ್ನಿಶಾಮಕದಳಕ್ಕೆ ತಿಳಿಸಿದ್ದಾರೆ. ಸಮೀಪದಲ್ಲೇ ಪೆಟ್ರೋಲ್ ಬಂಕ್ ಇದ್ದು ಭಾರೀ ಆತಂಕಕ್ಕೆ ಕಾರಣವಾಗಿತ್ತು. ಆದರೆ ಅಗ್ನಿಶಾಮಕದಳದ ೫ರಷ್ಟು  ತಂಡ ನಡೆಸಿದ ಸತತ ಪ್ರಯತ್ನದಿಂದ ಬೆಂಕಿಯನ್ನು ನಂದಿಸಿದೆ.

You cannot copy contents of this page