ಕೊಲ್ಲಂ ಕಲೆಕ್ಟರೇಟ್‌ನಲ್ಲಿ ಬಾಂಬ್ ಸ್ಫೋಟ ಪ್ರಕರಣ: ಎರಡನೇ ಆರೋಪಿಗೆ ತ್ರಿವಳಿ, ಇಬ್ಬರು ಆರೋಪಿಗಳಿಗೆ ಅವಳಿ ಜೀವಾವಧಿ ಸಜೆ
ಕೊಲ್ಲಂ: 2016 ಜೂನ್ 15ರಂದು ಬೆಳಿಗ್ಗೆ 10 ಗಂಟೆ ವೇಳೆ ಕೊಲ್ಲಂ ಕಲೆಕ್ಟರೇಟ್ ಆವರಣದ ಮುನಿಸಿಫ್ ನ್ಯಾಯಾಲಯ ಪರಿಸರದಲ್ಲಿ ಬಾಂಬ್ ಸ್ಫೋಟ ನಡೆಸಿದ ಪ್ರಕರಣದ ಒಂದನೇ ಆರೋಪಿಗೆ ಕೊಲ್ಲಂ ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲ ಯ ತ್ರಿವಳಿ ಜೀವಾವಧಿ ಸಜೆ ಹಾಗೂ ಇಬ್ಬರು ಆರೋಪಿಗಳಿಗೆ ಅವಳಿ ಜೀವಾವಧಿ ಸಜೆ ವಿಧಿಸಿ ತೀರ್ಪು ನೀಡಿದೆ. ಮಾತ್ರವಲ್ಲ ಆರೋಪಿಗಳಿಗೆ ಜೀವಾವಧಿ ಸಜೆಯ ಹೊರತಾಗಿ ತಲಾ ೩೪ ವರ್ಷ ಹೆಚ್ಚುವರಿ ಕಠಿಣ ಸಜೆ, ಕಠಿಣ ಸಜೆ ಹಾಗೂ ಜುಲ್ಮಾನೆ ವಿಧಿಸಿದೆ.
ಈ ಪ್ರಕರಣದ ಎರಡನೇ ಆರೋಪಿ ತಮಿಳುನಾಡು ಮಧುರೈ ನೋರ್ತ್ ಪುತ್ತೂರು ವಿಶ್ವನಾಥ ನಗರ್, ರಾಮಕೋತ್ತನಾಡು ಹೌಸ್‌ನ ಶಂಶುಲ್ ಕರೀಂ ರಾಜಾ (33) ನಿಗೆ ತ್ರಿವಳಿ ಜೀವಾವಧಿ ಸಜೆ ಹಾಗೂ ಎರಡು ಲಕ್ಷ ರೂ. ದಂಡ, ಒಂದನೇ ಆರೋಪಿ ತಮಿಳುನಾಡು ಮಧುರೈ ಇಸ್ಮಾಯಿಲ್ ಪುರ ನಾಲಾಂತರವಿನ ಅಬ್ಬಾಸ್ ಅಲಿ (31) ಹಾಗೂ ಇನ್ನೋರ್ವ ಆರೋಪಿ ತಮಿಳುನಾಡು ಮಧುರೈ ಸೌತ್ ನೆಲ್‌ಪೇಟೆ ತರವಿನ ದಾವೂದ್ ಸುಲೈಮಾನ್ (27) ಎಂಬವರಿಗೆ ನ್ಯಾಯಾಲಯ ಅವಳಿ ಜೀವಾವಧಿ ಸಜೆ ಹಾಗೂ 1.75 ಲಕ್ಷರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಈ ಪ್ರಕರಣದ ಆರೋಪಿಗ ಳೆಲ್ಲರೂ ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಬೇಸ್ ಮೂವ್‌ಮೆಂಟ್‌ನ ಸದಸ್ಯರಾಗಿದ್ದಾರೆ. ಶಿಕ್ಷೆಗೊಳಗಾದ ಆರೋಪಿಗಳನ್ನು ತಿರುವನಂತಪುರ ಸೆಂಟ್ರಲ್ ಜೈಲಿಗೆ ಸಾಗಿಸಲಾಗಿದೆ. ಆರೋಪಿ ಗಳ ಪೈಕಿ ಅಬ್ಬಾಸ್ ಅಲಿ ಬಾಂಬ್ ನಿರ್ಮಿಸಿದ್ದನು. ಅದನ್ನು ಇನ್ನೋರ್ವ ಆರೋಪಿ ಶಂಶುಲ್ ಕರೀಂ ರಾಜಾ ನ್ಯಾಯಾಲಯದ ಬಳಿ ಇದ್ದ ಜೀಪೊಂದಕ್ಕೆ ಲಗತ್ತಿಸಿದ್ದನು ಎಂಬುದು ಪೊಲೀಸರು ನಡೆಸಿದ ತನಿಖೆಯಲ್ಲಿ ಸ್ಪಷ್ಟಗೊಂಡಿತ್ತು. ಈ ಭಯೋತ್ಪಾದಕ ಸಂಘಟನೆಯಾದ ಬೇಸ್ ಮೂವ್ ಮೆಂಟ್ ರೂಪೀಕರಿಸಲ್ಪಟ್ಟ ಬಳಿಕ ದೇಶದ ಮೂರು ರಾಜ್ಯಗಳಲ್ಲಾಗಿ ಐದು ಕಲೆಕ್ಟರೇಟ್ ಮತ್ತು ನ್ಯಾಯಾಲಯದ ಸಮುಚ್ಛಯಗಳ ಮುಂದೆ ಬಾಂಬ್ ಸ್ಫೋಟ ನಡೆಸಿತ್ತು. ಆರೋಪಿಗಳ ವಿರುದ್ಧ ಯುಎಪಿಎ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.