ಕೊಲ್ಲಿಯಲ್ಲಿ ಕಾರ್ಯಕ್ರಮಕ್ಕೆ ತಲುಪುವ ಸಿನಿಮಾ ನಟಿಯರೊಂದಿಗೆ ಸಂಪರ್ಕ ಭರವಸೆ: ಹಲವರಿಗೆ ಲಕ್ಷಾಂತರ ರೂ. ವಂಚಿಸಿದ ಆರೋಪಿ ಸೆರೆ
ಕೊಚ್ಚಿ: ಎರ್ನಾಕುಳಂ ಎಳಮಕ್ಕರ ನಿವಾಸಿ ಶ್ಯಾಮ್‌ಮೋಹನ್‌ನನ್ನು ವಂಚನಾ ಆರೋಪದಂತೆ ಸೆರೆ ಹಿಡಿಯಲಾಗಿದೆ. ಈತ ಅನಿವಾಸಿಗಳನ್ನು ವಂಚಿಸಿರುವುದಾಗಿ ದೂರಲಾಗಿದೆ. ಕೊಲ್ಲಿಯಲ್ಲಿ ಮಲೆಯಾಳಿ ಸೋಷ್ಯಲ್ ಮೀಡಿಯಾ ಒಕ್ಕೂಟಗಳಲ್ಲಿ ಸಕ್ರಿಯನಾಗಿದ್ದ 37ರ ಹರೆಯದ ಶ್ಯಾಮ್ ಮೋಹನ್ ಈ ಅನುಭವವನ್ನು ಉಪಯೋಗಿಸಿಕೊಂಡು ಅನಿವಾಸಿ ಯರನ್ನು ವಂಚಿಸಿರುವುದಾಗಿ ದೂರ ಲಾಗಿದೆ. ಸಿನಿಮಾ ನಟಿಯರೊಂದಿಗೆ ಹತ್ತಿರದಲ್ಲಿ ವ್ಯವಹರಿಸಲು, ಲೈಂಗಿಕ ಸಂಪರ್ಕಕ್ಕೆ ಅವಕಾಶ ಮಾಡಿಕೊಡುವ ಭರವಸೆ ನೀಡಿ ಈತ ಅನಿವಾಸಿ ಕೇರಳೀಯರನ್ನು ವಂಚಿಸಿದ್ದಾನೆ. ಸಿನಿಮಾ ನಟಿಯರೊಂದಿಗೆ ಪರಿಚಯಗೊಳ್ಳಲು ಅವಕಾಶ ನೀಡವುದಾಗಿ ಕೊಲ್ಲಿಯ ಮಲೆ ಯಾಳಿ ಸೋಷ್ಯಲ್ ಮೀಡಿಯಾ ಗ್ರೂಪ್‌ಗಳಲ್ಲಿ ಜಾಹೀರಾತು ನೀಡಿ ಜನರನ್ನು ತನ್ನತ್ತ ಸೆಳೆದಿದ್ದನು. ನಟಿಯರ ಭಾವಚಿತ್ರ ಸಹಿತ ಈ ಜಾಹೀರಾತು ನೀಡಲಾಗಿತ್ತು. ಇದಕ್ಕಾಗಿ ಈತ ಹಣವನ್ನು ಪಡೆದಿದ್ದು, ನಟಿಯರೊಂದಿಗಿನ ಸಂಪರ್ಕದಾಸೆ ಯಿಂದ ಅನಿವಾಸಿ ಗಳು ಹಣವನ್ನು ನೀಡಿದ್ದರೆನ್ನಲಾಗಿದೆ. ಈ ವಿಷಯ ತಿಳಿದು ಇಬ್ಬರು ನಟಿಯರು ಸಿಟಿ ಪೊಲೀಸ್ ಕಮೀಷ ನರಿಗೆ ನೀಡಿದ ದೂರಿನ ಆಧಾರದಲ್ಲಿ ಸೈಬರ್ ಪೊಲೀಸರು ಕೇಸು ದಾಖಲಿಸಿ ನಡೆಸಿದ ತನಿಖೆ ಯಲ್ಲಿ ಆರೋಪಿಯನ್ನು ಸೆರೆ ಹಿಡಿಯ ಲಾಗಿದೆ. ಈ ವೇಳೆಗೆ ಈಗ ಈತ ಹಲವರಿಂದ ಲಕ್ಷಾಂತರ ರೂ.ವ ವಂಚಿಸಿರುವುದಾಗಿ ತಿಳಿದು ಬಂದಿದೆ.