ಕೊಲ್ಲಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕೇರಳೀಯ ದಂಪತಿ
ರಿಯಾದ್: ಸೌದಿ ಅರೇಬಿ ಯಾದಲ್ಲಿ ವಾಸ ಸ್ಥಳದಲ್ಲಿ ಕೇರಳೀಯ ದಂಪತಿ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಕೊಲ್ಲಂ ಕಡೈಕಲ್ ಚಿತರ ನಿವಾಸಿ ಶರತ್ (40), ಪತ್ನಿ ಪ್ರೀತಿ (32) ಎಂಬಿವರು ಮೃತಪಟ್ಟವರು. ಅಲ್‌ಖಾಸಿಂ ಉನೈಸದಲ್ಲಿರುವ ವಾಸಸ್ಥಳದಲ್ಲಿ ಇವರು ಮೃತಪಟ್ಟ ಬಗ್ಗೆ ತಿಳಿದು ಬಂದಿದೆ. ಕೊಠಡಿಯಲ್ಲಿ ಶರತ್ ನೇಣು ಬಿಗಿದ ಸ್ಥಿತಿಯಲ್ಲೂ, ನೆಲದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪ್ರೀತಿಯನ್ನು ಪತ್ತೆಹಚ್ಚಲಾಗಿದೆ.
ನಿನ್ನೆ ಕೆಲಸಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಪ್ರಾಯೋಜಕ ಮೊಬೈಲ್ ಮೂಲಕ ಸಂಪರ್ಕಿಸಲು ಯತ್ನಿಸಿದರೂ ಲಭಿಸದ ಹಿನ್ನೆಲೆಯಲ್ಲಿ ಹುಡುಕಾಡಿ ಫ್ಲಾಟ್‌ಗೆ ತಲುಪಿದ್ದರು. ಆಗ ಕೊಠಡಿ ಮುಚ್ಚಿದ ಸ್ಥಿತಿಯಲ್ಲಿದ್ದು, ಮುರಿದು ಒಳಹೋದಾಗ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹಗಳನ್ನು ಅಲ್ಲಿನ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಆದರೆ ಮರಣಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ.