ಕೋಳಿ ಅಂಕ: ಮೂವರ ಸೆರೆ
ಕಾಸರಗೋಡು: ಕಾಡಿನೊಳಗೆ ವಿಶಾಲವಾದ ಸ್ಥಳದಲ್ಲಿ ಕೋಳಿಅಂಕ ನಡೆಸುತ್ತಿದ್ದ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ಕೋಳಿಗಳ ಸಹಿತ 910 ರೂಪಾ ಯಿಗಳನ್ನು ವಶಪಡಿಸಲಾಗಿದೆ. ಕೊಳತ್ತೂರು ಕುಳಿಯನ್ಮರಂ ಎಂಬಲ್ಲಿ ನಿನ್ನೆ ಸಂಜೆ ಕೋಳಿ ಅಂಕ ನಡೆಯುತ್ತಿದ್ದ ವೇಳೆ ಬೇಡಗಂ ಪೊಲೀಸರು ದಾಳಿ ನಡೆಸಿದ್ದರು. ಸ್ಥಳದಿಂದ ಅಂಬಲತ್ತರ ಕುಂಬಳ ಬೈರಕ್ಕೋಟ್‌ನ ಪಿ. ಅಜಿತ್ (32), ಕುಂಬಳ ಕಣ್ಣೋತ್ತ್ ಕಕ್ಕಾಟ್ ಹೌಸ್‌ನ ಸಜೀಶ್ (36), ಪೆರಿಯ ಚೆರಕ್ಕಾಲ್ ಹೌಸ್‌ನ ಎಂ. ರಂಜಿತ್ (25) ಎಂಬಿವರು ಸೆರೆಗೀಡಾದವ ರಾಗಿದ್ದಾರೆ. ಇನ್ನೂ ಹಲವರು ಓಡಿ ಪರಾರಿಯಾಗಿರು ವುದಾಗಿಯೂ, ಅವರ ವಿರುದ್ಧ ಕೇಸು ದಾಖಲಿಸಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.