ಕೋವಿಡ್ ಮತ್ತೆ ತಲೆ ಎತ್ತುವಾಗ ಜನರಲ್ ಆಸ್ಪತ್ರೆಯಲ್ಲಿ ಶ್ವಾಸಕೋಶ ತಜ್ಞರಿಲ್ಲ: ಸಮಸ್ಯೆ ಪರಿಹರಿಸಲು ಆಗ್ರಹ

ಕಾಸರಗೋಡು: ಕೋವಿಡ್ ಮಹಾಮಾರಿ ಮತ್ತೆ ತಲೆ ಎತ್ತತೊಡ ಗಿದೆಯೆಂದು ಮುನ್ನೆಚ್ಚರಿಕೆಗಳನ್ನು ಆಗಾಗ ನೀಡಲಾಗುತ್ತಿರುವ ಮಧ್ಯೆ ಕೋವಿಡ್ ಪ್ರತಿರೋಧಕ್ಕೆ ರಾಜ್ಯ ದಲ್ಲಿಯೇ ಮಾದರಿಯಾಗಿದ್ದ ಕಾಸ ರಗೋಡು ಜನರಲ್ ಆಸ್ಪತ್ರೆಯಲ್ಲಿ ಶ್ವಾಸಕೋಶ ರೋಗ ತಜ್ಞನ ಹುದ್ದೆ ತೆರವಾಗಿದೆ. ಜನರಲ್ ಆಸ್ಪತ್ರೆಯ ಪಲ್ಮೋನರಿ ತಜ್ಞರಾಗಿದ್ದ ಡಾ| ಅಬ್ದುಲ್ ಸತ್ತಾರ್ ನಿವೃತ್ತರಾಗಿ ಹಲವಾರು ತಿಂಗಳು ಕಳೆದರೂ ಈ ಹುದ್ದೆ ಈಗಲೂ ತೆರ ವಾಗಿದೆ. ಮಳೆ ಗಾಲ ಆರಂಭದೊಂದಿಗೆ ಹೆಚ್ಚಿನವರು ಈಗ ಉಸಿರಾಟ ಸಂಬಂಧ ಸಮಸ್ಯೆ ಎದುರಿಸುತ್ತಿದ್ದಾರೆ. ಶ್ವಾಸಕೋಶ ರೋಗಕ್ಕೆ ಔಷಧಿಗಾಗಿ ತಲುಪುವ ರೋಗಿಗಳಿಗೆ ಇತರ ವೈದ್ಯರುಗಳು ಪರಿಶೀಲಿಸಿ ಔಷಧಿ ನೀಡುತ್ತಾ ರಾದರೂ ತಜ್ಞರ ಕೊರತೆ ಸಮಸ್ಯೆಯಾಗಿ ಉಳಿದಿದೆ.

ಇದೇ ವೇಳೆ ದಿನವೂ ಸಾವಿರಾ ರು ರೋಗಿಗಳು ತಲುಪುವ ಜನರಲ್ ಆಸ್ಪತ್ರೆಯಲ್ಲಿ ಎಲುಬುರೋಗ ತಜ್ಞನ ಕೊರತೆಯೂ ಸಮಸ್ಯೆಯಾಗುತ್ತಿದೆ. ವಾರಕ್ಕೆ ಮೂರು ಅಥವಾ ನಾಲ್ಕು ದಿನ ಮಧ್ಯಾಹ್ನವರೆಗೆ ಎಲುಬು ತಜ್ಞರಿದ್ದರೂ ಉಳಿದ ಸಮಯಗಳಲ್ಲಿ  ಅಪಘಾತದಲ್ಲಿ ಗಾಯಗೊಂಡ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಬೇಕಾಗುತ್ತಿದೆ. ಆಸ್ಪತ್ರೆಯಲ್ಲಿ  ಕಾರ್ಯಾಚರಿಸುತ್ತಿರುವ ಜ್ವರ ಕ್ಲಿನಿಕ್‌ನಲ್ಲಿ ರೋಗಿಗಳ ದಟ್ಟಣೆ ಕಂಡುಬರುತ್ತಿದೆ. ಅಪರಾಹ್ನ 2ರಿಂದ ರಾತ್ರಿ 7 ಗಂಟೆವರೆಗೆ ಈ ಕ್ಲಿನಿಕ್ ಕಾರ್ಯಾಚರಿಸುತ್ತಿದೆ. ಜ್ವರ,ವಾಂತಿ, ಬೇಧಿ, ಆಯಾಸ ಮೊದಲಾದ ರೋಗಗಳೊಂದಿಗೆ ಹಲವಾರು ಮಂದಿ ಆಸ್ಪತ್ರೆಗೆ ತಲುಪುತ್ತಿದ್ದಾರೆ.

ಇದೇ ವೇಳೆ ಇತರ ಹಲವು ರೀತಿಯ ರೋಗಗಳಿಗೆ ಜನರಲ್ ಆಸ್ಪತ್ರೆ ಯಿಂದ ಉತ್ತಮ ಚಿಕಿತ್ಸೆ ಲಭಿಸುತ್ತಿದೆ. ಮೂರು ಮಂದಿ ಫಿಶೀಷ್ಯನ್‌ಗಳು, ಮೂವರು ಗೈನಗಾಲಜಿಸ್ಟ್‌ಗಳು ಇದ್ದಾರೆ. ಮೂರು ಮಂದಿ ಸರ್ಜನ್‌ರ ಸೇವೆಯೂ ಲಭ್ಯವಿದೆ. ಇಎನ್‌ಟಿ, ನ್ಯೂರೋಲಜಿ, ಕ್ಯಾನ್ಸರ್, ಡಯಾಸಿಲಿಸ್ ಸೇವೆಯೂ ಇಲ್ಲಿ ಲಭ್ಯವಿದೆ. ಆದರೆ ಶ್ವಾಸಕೋಶ ರೋಗ ತಜ್ಞರನ್ನು  ಶೀಘ್ರ ನೇಮಕ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page