ಕ್ಷಮೆ ನೀಡುವ ಪ್ರಶ್ನೆಂ ಇಲ್ಲ : ಕೊಲೆಗೈಯ್ಯಲ್ಪಟ್ಟ ತಲಾಲ್‌ನ ಸಹೋದರ; ಗಲ್ಲು ಶಿಕ್ಷೆಯಿಂದ ನಿಮಿಷಪ್ರಿಯಳನ್ನು ಪಾರುಮಾಡಲು ಮುಂದುವರಿದ ಯತ್ನ
ತಿರುವನಂತಪುರ: 2017ರಲ್ಲಿ ಯೆಮನ್‌ನಲ್ಲಿ ಯೆಮನ್ ಪ್ರಜೆ ತಲಾಲ್ ಅಬ್ಡೋ ಮುಹ್ದಿ ಎಂಬವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಗಲ್ಲು ಶಿಕ್ಷೆ ವಿಧಿಸಲ್ಪಟ್ಟ ಪಾಲಕ್ಕಾಡ್ ಕೊಲ್ಲಂ ಗೋಡು ನಿವಾಸಿಯೂ ಯೆಮನ್‌ನಲ್ಲಿ ನರ್ಸ್‌ಆಗಿ ದುಡಿಯುತ್ತಿದ್ದ ನಿಮಿಷಪ್ರಿಯಾ ರನ್ನು ಶಿಕ್ಷೆಯಿಂದ ಪಾರು ಮಾಡುವ ಪ್ರಯತ್ನ ಮುಂದುವರಿಯುತ್ತಿದೆ.
ನಿಮಿಷರನ್ನು ಶಿಕ್ಷೆಯಿಂದ ಪಾರು ಮಾಡಲು ಕೇರಳದ ಪ್ರಭಾವಿ ಸುನ್ನಿ ಮುಸ್ಲಿಂ ಧಾರ್ಮಿಕ ಮುಖಂಡ ಎ.ಪಿ. ಅಬೂಬಕರ್ ಮುಸ್ಲಿಯಾರ್ ಮೊದಲು ಮಧ್ಯಪ್ರವೇಶ ನಡೆಸಿದ್ದರು. ಅವರು ಯೆಮನ್‌ನಲ್ಲ್ಲಿರುವ ಧಾರ್ಮಿಕ ಮುಖಂಡ ಶೇಖ್ ಹಬೀರ್ ಉಮರ್ ಜೊತೆ ಮಾತುಕತೆ ನಡೆಸಿ ನಿಮಿಷರನ್ನು ಶಿಕ್ಷೆಯಿಂದ ಪಾರು ಮಾಡುವ ಬಗ್ಗೆ ಚರ್ಚೆ ನಡೆಸಿದ್ದರು. ಮಾತ್ರವಲ್ಲ ನಿಮಿಷರನ್ನು ಬಿಡುಗಡೆಗೊಳಿಸಲು ಭಾರತ ಸರಕಾರವೂ ಇನ್ನೊಂದೆಡೆ ನಿರಂತರ ಪ್ರಯತ್ನ ನಡೆಸುತ್ತಿದೆ. ಇದರ ಫಲವಾಗಿ ನಿಮಿಷರ ಗಲ್ಲುಶಿಕ್ಷೆಯನ್ನು ಯೆಮನ್ ಸುಪ್ರೀಂ ಜ್ಯುಡೀಶಿಂiiಲ್ ಕೌನ್ಸಿಲ್ ಸದ್ಯ ಮುಂದೂಡಿದೆ.
ನಿಮಿಷರನ್ನು ಬಿಡುಗಡೆಗೊಳಿಸುವ ಪ್ರಯತ್ನ ಇನ್ನೂ ಮುಂದುವರಿಯುತ್ತಿ ರುವಂತೆಯೇ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಇಂದು ಬೆಳಿಗ್ಗೆ ಕಾಂತಾಪುರಂ ಅಬೂಬಕರ್ ಮುಸ್ಲಿಯಾರ್‌ರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಮಾನವೀಯ ನೆಲೆಯಲ್ಲಿ ನಿಮಿಷರನ್ನು ಶಿಕ್ಷೆಯಿಂದ ಬಿಡುಗಡೆಗೊಳಿಸುವ ಸರ್ವ ಪ್ರಯತ್ನ ನಡೆಸಲಾಗುವುದೆಂದು ಚರ್ಚೆ ಬಳಿಕ ಗೋವಿಂದನ್ ತಿಳಿಸಿದ್ದಾರೆ.
ನನ್ನ ಸಹೋದರ ತಲಾಲ್‌ನನ್ನು ಕೊಲೆಗೈದ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೊಳಗಾದ ನಿಮಿಷರಿಗೆ ಯಾವುದೇ ಕಾರಣಕ್ಕೂ ಕ್ಷಮೆ ನೀಡುವಂತಿಲ್ಲವೆಂದು ಆತನ ಸಹೋದರ ಸ್ಪಷ್ಟಪಡಿಸಿದ್ದಾರೆ. ಇದು ನಿಮಿಷರನ್ನು ಶಿಕ್ಷೆಯಿಂದ ರಕ್ಷಿಸುವ ಪ್ರಯತ್ನಗಳಿಗೆ ಪ್ರತಿಕೂಲಕರವಾಗಿ ಪರಿಣಮಿಸಿದೆ. ಶಿಕ್ಷೆಯಲ್ಲಿ ಯಾವುದೇ ರೀತಿಯ ಮಧ್ಯಸ್ಥಿಕೆ ಚರ್ಚೆಗಳಿಗೆ ನಾವು ಸಿದ್ಧರಿಲ್ಲ. ನಮಗೆ ದಯಾಧನದ ಅಗತ್ಯವೂ ಇಲ್ಲ.ಇದು ಅತ್ಯಂತ ಕ್ರೂರ ರೀತಿಯ ಕೊಲೆಯಾಗಿದೆ. ಆದ್ದರಿಂದ ಅಲ್ಪ ತಡವಾದರೂ ಶಿಕ್ಷೆ ಜ್ಯಾರಿಗೊಳಿಸಲೇ ಬೇಕೆಂದು ತಲಾಲ್‌ನ ಸಹೋದರ ಹೇಳಿದ್ದಾರೆ. ಇನ್ನೊಂದೆಡೆ ನಿಮಿಷರಿಗೆ ಕ್ಷಮಾದಾನ ನೀಡಬೇಕೆಂದು ತಲಾಲ್‌ನ ಕೆಲವು ಕುಟುಂಬ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಈ ವಿಷಯದಲ್ಲಿ ಯಾರೂ ಯಾವುದೇ ರೀತಿಯ ಬಹಿರಂಗ ಹೇಳಿಕೆ ನೀಡದಂತೆ ಭಾರತೀಯ ವಿದೇಶಾಂಗ ಸಚಿವಾಲಯ ನಿರ್ದೇಶ ನೀಡಿದೆ. ಈ ವಿಷಯದಲ್ಲಿ ಯೆಮನ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡದಂತೆ ಖಾತರಿಪಡಿಸಬೇಕಾದ ಅಗತ್ಯವೂ ಇದೆ. ಆದ್ದರಿಂದ ಈ ವಿಷಯದಲ್ಲಿ ಯಾವುದೇ ರೀತಿಯ ಅನಗತ್ಯ ಚರ್ಚೆಯ ವಿವಾದಗಳಿಗೆ ಹುಟ್ಟುಹಾಕಬಾರದೆಂದೂ ಹಾಗೆ ನಡೆದಲ್ಲಿ ನಿಮಿಷರ ಬಿಡುಗಡೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆಯೆಂದು ವಿದೇಶಾಂಗ ಸಚಿವಾಲಯ ಮುನ್ನೆಚ್ಚರಿಕೆ ನೀಡಿದೆ.