ಖಾಸಗಿ ಹಣಕಾಸು ಸಂಸ್ಥೆಗೆ ನುಗ್ಗಿ ಮೆನೇಜರ್‌ಗೆ ಹಲ್ಲೆ

ಕುಂಬಳೆ: ಖಾಸಗಿ  ಹಣಕಾಸು ಸಂಸ್ಥೆಗೆ ಅತಿಕ್ರಮಿಸಿ ನುಗ್ಗಿದ ಮಾಜಿ ನೌಕರ ಹಾಗೂ ಸಹೋದರ ಸೇರಿ ಮೆನೇಜರ್‌ಗೆ ಹೆಲ್ಮೆಟ್‌ನಿಂದ ಹೊಡೆದು ಗಾಯಗೊಳಿಸಿರುವುದಾಗಿ ದೂರಲಾಗಿದೆ. ಕುಂಬಳೆಯ ಖಾಸಗಿ ಹಣಕಾಸು ಸಂಸ್ಥೆಯ ಮೆನೇಜರ್ ವಿದ್ಯಾನಗರ ಪನ್ನಿಪ್ಪಾರೆ ನಿವಾಸಿಯಾದ ಜೀವನ್ (೩೩) ಎಂಬವರಿಗೆ ಹಲ್ಲೆಗೈಯ್ಯಲಾಗಿದ್ದು, ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ ಈ ಘಟನೆ ನಡೆದಿದೆ. ತಾನು ಕೆಲಸ ನಿರ್ವಹಿಸುವ ಸಂಸ್ಥೆಯ ಮಾಜಿ ನೌಕರ ಹಾಗೂ ಆತನ ಸಹೋದರ ಸೇರಿ ಹಲ್ಲೆಗೈದಿರುವುದಾಗಿ ಜೀವನ್ ಆರೋಪಿಸಿದ್ದಾರೆ. ಸ್ವಂತ ಇಷ್ಟ ಪ್ರಕಾರ ಕೆಲಸ ಬಿಟ್ಟಿದ್ದಾರೆಂದೂ ಅನಂತರ ನಡೆಸಿದ ತಪಾಸಣೆಯಲ್ಲಿ ವಂಚನೆ ನಡೆದಿರುವುದಾಗಿ ಪತ್ತೆಹಚ್ಚಲಾಗಿದೆಯೆಂದು ಜೀವನ್ ತಿಳಿಸಿದ್ದಾರೆ. ಈ ಕುರಿತಾಗಿ ಪ್ರಶ್ನಿಸಿದ  ದ್ವೇಷದಿಂದ ಸಹೋದರನೊಂದಿಗೆ ತಲುಪಿ ಹಲ್ಲೆಗೈದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕಚೇರಿಯ ಪೀಠೋಪಕರಣಗಳನ್ನು ನಾಶಗೊಳಿಸಿರುವುದಾಗಿಯೂ ದೂರಲಾಗಿದೆ.

You cannot copy contents of this page