ಗೋಸಾಡ ಕ್ಷೇತ್ರದಲ್ಲಿ ಚಂಡಿಕಾಯಾಗ ಆಮಂತ್ರಣ ಪತ್ರಿಕೆ ಬಿಡುಗಡೆ

ಗೋಸಾಡ: ಗೋಸಾಡ ಶ್ರೀ ಮಹಿಷಮರ್ದಿನಿ ಕ್ಷೇತ್ರದಲ್ಲಿ ಮೇ 5, 6ರಂದು ಜರಗಲಿರುವ ಚಂಡಿಕಾಯಾಗ ಹಾಗೂ ವಿಶೇಷ ಮೂಡಪ್ಪಸೇವೆಯ ಆಮಂತ್ರಣ ಪತ್ರಿಕೆಯನ್ನು ನಿನ್ನೆ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು. ಕ್ಷೇತ್ರ ಸೇವಾ ಸಮಿತಿ ಉಪಾಧ್ಯಕ್ಷ ಪ್ರಭಾಕರ ರೈ ಮಠದಮೂಲೆ ಅಧ್ಯಕ್ಷತೆ ವಹಿಸಿದರು. ಉದ್ಯಮಿ ನಿತ್ಯಾನಂದ ಶೆಣೈ, ನಿವೃತ್ತ ಜಿಲ್ಲಾ ಮೆಡಿಕಲ್ ಆಫೀಸರ್ ರಾಮಚಂದ್ರ ಮಾರ್ಪನಡ್ಕ, ಉದ್ಯಮಿ ಶಂಕರನಾರಾ ಯಣ ಮಯ್ಯ, ಮೊಕ್ತೇಸರ ಶ್ರೀನಿವಾಸ ಅಮ್ಮಣ್ಣಾಯ ಪಾವೂರು, ಸೇವಾ ಸಮಿತಿ ಉಪಾಧ್ಯಕ್ಷ ಪ್ರಸಾದ ಮಣಿಯಾಣಿ ಗೋಸಾಡ, ಅರ್ಚಕ ರಾಘವೇಂದ್ರ ಚಡಗ, ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ, ಮಾತೃಮಂಡಳಿ ಅಧ್ಯಕ್ಷೆ ಲಲಿತಾ ಸುಬ್ಬ ಪಾಟಾಳಿ, ಪಾಲಕೃಷ್ಣ ಕೆ.ಕೆ., ಗಂಗಾಧರ ರೈ ಮಠದಮೂಲೆ, ವಾಣಿಪ್ರಸಾದ್ ಅಮ್ಮಣ್ಣಾಯ ಪಾವೂರು, ಸೀತಾರಾಮ ರೈ ಉಪಸ್ಥಿತರಿದ್ದರು. ವಸಂತಕುಮಾರ್ ಗೋಸಾಡ ಪ್ರಾರ್ಥನೆ ಹಾಡಿದರು. ಸೇವಾ ಸಮಿತಿ ಕಾರ್ಯದರ್ಶಿ ಸದಾಶಿವ ರೈ ಸ್ವಾಗತಿಸಿ, ನಾರಾಯಣ ಗೋಸಾಡ ವಂದಿಸಿದರು. ಅಮೃತ್‌ರಾಜ್ ರೈ ಮರತ್ತಿಲ ನಿರೂಪಿಸಿದರು. ಪರಮೇಶ್ವರ ಭಟ್ ಗೋಸಾಡ ಅವರ ವತಿಯಿಂದ ಅನ್ನ ಸಂತರ್ಪಣೆ ಜರಗಿತು.

RELATED NEWS

You cannot copy contents of this page