ಗಡಿನಾಡ ಸಾಹಿತ್ಯ ಉತ್ಸವ: ಬಸವರಾಜ ಎಸ್. ಹೊರಟ್ಟಿಯವರಿಗೆ ಮಸ್ಕತ್ ವಿಮಾನ ನಿಲ್ದಾಣದಲ್ಲಿ ಸ್ವಾಗತ
ಕಾಸರಗೋಡು: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ, ಒಮಾನ್ ಘಟಕ ಮಸ್ಕತ್ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ ಮತ್ತು ಒಮಾನ್‌ನ ಎಲ್ಲಾ ಕನ್ನಡ ಪರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಾಳೆ ಮಸ್ಕತ್‌ನ ಮಝಾನ್ ಹೈಟ್ಸ್ ಸಭಾಂಗಣದಲ್ಲಿ ನಡೆಯುವ ಮಸ್ಕತ್ ಗಡಿನಾಡ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ತಲುಪಿದ ಕರ್ನಾಟಕ ವಿಧಾನಪರಿಷತ್ ಸಭಾಪತಿ ಬಸವರಾಜ ಎಸ್. ಹೊರಟ್ಟಿಯವರನ್ನು ಮಸ್ಕತ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು. ಒಮಾನ್ ಇಂಡ್ಯನ್ ಸೋಶ್ಯಲ್ ಕ್ಲಬ್‌ನ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಎಸ್‌ಡಿಟಿ ಪ್ರಸಾದ್, ಮಸ್ಕತ್ ಕನ್ನಡ ಸಂಘದ ಅಧ್ಯಕ್ಷ ಮಂಜುನಾಥ ಸಂಗಟ್ಟಿ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಒಮಾನ್ ಘಟಕದ ಅಧ್ಯಕ್ಷ ಅಬೂಬಕ್ಕರ್ ರೋಯಲ್ ಬೊಳ್ಳಾರ್, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಒಮಾನ್ ಘಟಕದ ಸಲಹಾ ಸಮಿತಿ ಸದಸ್ಯ ಶಿವಾನಂದ ಕೋಟ್ಯಾನ್, ಮೂಡುಬಿದ್ರೆ ಪಿ.ಯು ಕಾಲೇಜಿನ ನಿರ್ದೇಶಕ ಅಮರೇಶ್ ವಾಟಕಲ್ ಮೊದಲಾದವರು ಉಪಸ್ಥಿತರಿದ್ದರು.