ಗಣರಾಜ್ಯೋತ್ಸವದಲ್ಲಿ ಸಾಧಕರಿಗೆ ಸನ್ಮಾನ
ಕಾಸರಗೋಡು: ವಿದ್ಯಾನಗರ ನಗರಸಭಾ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ ವ್ಯಕ್ತಿಗಳನ್ನು ಗೌರವಿಸಲಾಗುವುದು.
2024ರಲ್ಲಿ ಥಾಲ್ಯಾಂಡ್‌ನಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಪ್ರಬಂಧ ಮಂಡಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್, ಫಿಲಿಪೈನ್ಸ್‌ನ ಮನಿಲಾದಲ್ಲಿ ನಡೆದ ಏಷ್ಯಾ ಫೆಸಿಫಿಕ್ ಮಿನಿಸ್ಟೀರಿಯಲ್ ಸಮ್ಮೇಳನದಲ್ಲಿ ಲೋಕಲ್ ಲೀಡರ್ ಚಾಂಪ್ಯನ್ ಆಗಿ ಆಯ್ಕೆಯಾದ ವಲಿಯಪರಂಬ್ ಪಂಚಾಯತ್ ಅಧ್ಯಕ್ಷ ವಿ.ವಿ. ಸಜೀವನ್, 2024 ದಶಂಬರ್‌ನಲ್ಲಿ ನಡೆದ ಭೂತಾನ್ ಸಂದರ್ಶನಕ್ಕೆ ಆಯ್ಕೆಯಾದ ಎನ್‌ಸಿಸಿ 32 ಕೇರಳ ಬೆಟಾಲಿಯನ್ ಎನ್. ನಂದಕಿಶೋರ್, ಕಾಸರಗೋಡಿನಲ್ಲಿ ನಡೆದ ನಾಗರಿಕ ಸೇವಾ ವಿಭಾಗದ ಕಬಡ್ಡಿ ವಿಜೇತ ಜಿಲ್ಲಾ ಮಹಿಳಾ ತಂಡವನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು.