ಗುಜರಾತ್‌ನಲ್ಲಿ ಬಿಜೆಪಿ ನೇತಾರೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಸೂರತ್: ಗುಜರಾತ್‌ನ ಸೂರತ್ ನಲ್ಲಿ ಬಿಜೆಪಿ ನೇತಾರೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸೂರತ್ ವಾರ್ಡ್ ನಂಬ್ರ ೩೦ರ ಮಹಿಳಾ ಮೋರ್ಚಾ ನೇತಾರೆ ದೀಪಿಕ ಪಟೇಲ್ (34) ಸಾವಿಗೀಡಾದವರು. ಕೃಷಿಕನಾದ ಪತಿ ಹಾಗೂ ಮೂವರು ಮಕ್ಕಳಿರುವ ದೀಪಿಕರ ಸಾವಿಗೆ ಕಾರಣವೇನೆಂದು ಸ್ಪಷ್ಟಗೊಂಡಿಲ್ಲ. ತನಿಖೆ ನಡೆಸುತ್ತಿರು ವುದಾಗಿ ಪೊಲೀಸರು ತಿಳಿಸಿದ್ದಾರೆ. ಮನೆಯೊಳಗೆ ಗಂಭೀರ ಸ್ಥಿತಿಯಲ್ಲಿ ಪತ್ತೆಯಾದ ಇವರನ್ನು ಸಂಬಂಧಿಕರು ಆಸ್ಪತ್ರೆಗೆ ತಲುಪಿಸಿದ್ದರು. ಆದರೆ ಅಷ್ಟರೊಳಗೆ ಸಾವು ಸಂಭವಿಸಿತ್ತು. ಫಾರೆನ್ಸಿಕ್ ತಜ್ಞರು ಘಟನೆ ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದಾರೆ. ಸಾವಿಗೀಡಾ ಗುವ ಮೊದಲು ಚಿರಾಗ್ ಸೋಲಂಗಿ ಎಂಬವರಿಗೆ ದೀಪಿಕ ಫೋನ್ ಕರೆ ಮಾಡಿರುವುದಾಗಿ ತಿಳಿದು ಬಂದಿದೆ. ತಾನು ಒತ್ತಡದಲ್ಲಿರುವುದಾಗಿಯೂ, ಜೀವಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿರುವುದಾಗಿ ಚಿರಾಗ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಫೋನ್ ಕರೆ ಬಂದೊಡನೆ ಚಿರಾಗ್ ದೀಪಿಕರ ಮನೆಗೆ ತಲುಪಿದ್ದು, ಈ ವೇಳೆ ಬಾಗಿಲು ಮುಚ್ಚಿಕೊಂಡಿತ್ತು. ಇವರ ಪುತ್ರಿ ಬೇರೊಂದು ಕೊಠಡಿಯಲ್ಲಿ ದ್ದಳೆನ್ನಲಾಗಿದೆ. ದೀಪಿಕರ ಕೊಠಡಿಯ ಬಾಗಿಲು ತೆರೆದು ನೋಡಿದಾಗ ಅವರು ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದೇ ವೇಳೆ ಘಟನೆಗೆ ಸಂಬಂಧಿಸಿ ಚಿರಾಗ್ ಸೋಲಂಗಿಯನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.