ಗುಣಮಟ್ಟವಿಲ್ಲ: ವಿದ್ಯುತ್ ಆಟೋರಿಕ್ಷಾದ ಬೆಲೆ, ನಷ್ಟ ಪರಿಹಾರವಾಗಿ 1 ಲಕ್ಷ ನೀಡಲು ಆದೇಶ
ಹೊಸದುರ್ಗ: ಗುಣಮಟ್ಟ ವಿಲ್ಲದ ವಿದ್ಯುತ್ ಆಟೋರಿಕ್ಷಾ ಮಾರಾಟ ಮಾಡಿರುವುದಾಗಿ ನೀಡಿದ ದೂರಿನಂತೆ ಕಂಪೆನಿ ಹಾಗೂ ವಿತರಿಸಿದ ಸಂಸ್ಥೆ ಸೇರಿ ವಸೂಲು ಮಾಡಿದ ಮೊತ್ತ ಹಾಗೂ ನಷ್ಟ ಪರಿಹಾರವನ್ನು ನೀಡಲು ಕಣ್ಣೂರು ಗ್ರಾಹಕ ವಿವಾದ ಪರಿಹಾರ ಆಯೋಗ ಆದೇಶಿಸಿದೆ. ಚೆರ್ವತ್ತೂರಿನ ಮಯಿಚ್ಚದ ಕೆ.ಪಿ. ಜಯನ್ ನೀಡಿದ ದೂರಿನಂತೆ ಈ ಆದೇಶ ನೀಡಲಾಗಿದೆ. ಆಟೋರಿಕ್ಷಾಕ್ಕಾಗಿ ನೀಡಿದ 2,87,900 ರೂ. ಹಾಗೂ ನಷ್ಟ ಪರಿಹಾರವಾಗಿ 1,00,000 ರೂ. ಮತ್ತು ನ್ಯಾಯಾಲಯ ವೆಚ್ಚ 10,000 ರೂ.ವನ್ನು ನೀಡಬೇಕೆಂದು ಆಯೋಗ ಆದೇಶಿಸಿದೆ.
ಹಾನಿಯಾದ ಆಟೋರಿಕ್ಷಾ ವನ್ನು ಹಿಂದಕ್ಕೆ ಪಡೆದು ಮೊತ್ತ ನೀಡಬೇಕು. ತೀರ್ಪಿನ ಪ್ರತಿ ಲಭಿಸಿದ ಬಳಿಕ ಒಂದು ತಿಂಗಳೊಳಗೆ ಆದೇಶ ಪಾಲಿಸಬೇಕು. ದೂರುದಾರನಿಗೆ ಬೇಕಾಗಿ ನ್ಯಾಯವಾದಿ ಕೆ. ಸುರೇಶ್ ನಂಬ್ಯಾರ್ ಹಾಜರಾಗಿದ್ದರು.