ಕಾಸರಗೋಡು: ಗುರುಪೂಜೆ ಕಾರ್ಯಕ್ರಮವನ್ನು ಅಪಾರ್ಥವಾಗಿ ವ್ಯಾಖ್ಯಾನಿಸಿ ಸಮಾಜದಲ್ಲಿ ತಪ್ಪು ಧೋರಣೆ ಸೃಷ್ಟಿಸಲು ಹಾಗೂ ರಾಜಕೀಯ ಲಾಭಗಳಿಸಲು ಯತ್ನ ನಡೆಯುತ್ತಿದೆಯೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್ ಅಭಿಪ್ರಾಯಪಟ್ಟರು. ಬಂದಡ್ಕ ಸರಸ್ವತಿ ವಿದ್ಯಾಲಯ ಸಹಿತದ ರಾಜ್ಯದೆಲ್ಲೆಡೆಯ ವಿವಿಧ ವಿದ್ಯಾಲಯಗಳಲ್ಲಿ ನಡೆದ ಗುರುಪೂಜೆ ಕಾರ್ಯಕ್ರಮವನ್ನು ವಿವಾದಗೊಳಿ ಸಲು ಎಡ-ಬಲ ಒಕ್ಕೂಟಗಳ ಯತ್ನದ ಬಗ್ಗೆ ಅವರು ಪ್ರತಿಕ್ರಿಯಿಸಿದರು ಭಾರತೀಯ ಸಂಸ್ಕೃತಿಯ ಆಧಾರದಲ್ಲಿ ಕಾರ್ಯಾಚರಿಸುವ ವಿದ್ಯಾಲಯಗಳಲ್ಲಿ ಪ್ರತೀ ವರ್ಷ ಗುರುಪೂಜೆ ನಡೆಯುತ್ತದೆ. ಅಧ್ಯಾಪಕರು ಸಹಿತದ ಹಿರಿಯರನ್ನು ಗೌರವಿಸುವುದಕ್ಕಿರುವ ತರಬೇತಿಯಾಗಿದೆ ಇದು. ಯಾವುದೇ ಮಗುವನ್ನು ಒತ್ತಾಯಪೂರ್ವಕವಾಗಿ ಗುರುಪೂಜೆಯಲ್ಲಿ ಪಾಲ್ಗೊಳ್ಳಿಸಲಾಗು ತ್ತಿಲ್ಲ. ತಮ್ಮ ಮಕ್ಕಳು ಉತ್ತಮ ಜೀವನಶೈಲಿಯನ್ನು ಅನುಸರಿಸಬೇಕು ಎಂಬ ಆಗ್ರಹವಿರುವವರು ಮಕ್ಕಳನ್ನು ವಿದ್ಯಾನಿಕೇತನ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ನಿವೃತ್ತರಾಗುವ ಮುಖ್ಯೋಪಾಧ್ಯಾಯಿನಿಗೆ ಅಂತ್ಯಕ್ರಿಯೆ ಸಿದ್ಧತೆ ನಡೆಸುವುದು, ಮುಖ್ಯೋಪಾಧ್ಯಾಯಿನಿಯ ಕುರ್ಚಿ ಸುಡುವುದು, ಮನೆಗೆ ಬಾಂಬ್ ಎಸೆಯುವುದು ಮೊದಲಾದವುಗಳನ್ನು ಎಸ್‌ಎಫ್‌ಐ ಹಾಗೂ ಡಿವೈಎಫ್‌ಐ, ಸಿಪಿಎಂ ವಿದ್ಯಾರ್ಥಿಗಳಿಗೆ ಕಲಿಸುತ್ತಿರು ವುದಾಗಿ ಅವರು ಆರೋಪಿಸಿದರು.
