ಗೃಹಿಣಿಗೆ ಕಿರುಕುಳ ನೀಡಿದ ಯುವಕ ಸೆರೆ
ಮುಳ್ಳೇರಿಯ: ಗೃಹಿಣಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಯುವಕ ಸೆರೆಗೀಡಾಗಿದ್ದಾನೆ. ಅಡೂರು ಕೊರತ್ತಿಮೂಲೆ ನಿವಾಸಿಯಾದ ೩೭ರ ಹರೆಯದ ಯುವಕ ಸೆರೆಗೀಡಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿತ್ತು. ನಲ್ವತ್ತರ ಹರೆಯದ ಗೃಹಿಣಿ ಈ ಬಗ್ಗೆ ದೂರು ನೀಡಿದ್ದಳು. ಯುವಕನ ವಿರುದ್ಧ ಇದೇ ಯುವತಿ ಈ ಹಿಂದೆಯೂ ಇದೇ ರೀತಿಯ ದೂರು ನೀಡಿದ್ದಳ. ಈ ಬಗ್ಗೆ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಅನಂತರವೂ ಯುವತಿಗೆ ಆರೋಪಿ ಕಿರುಕುಳ ನೀಡಿರುವುದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಕೇಸು ದಾಖಲಿಸುವುದರೊಂದಿಗೆ ತಲೆಮರೆಸಿಕೊಂಡ ಆರೋಪಿ ಇತ್ತೀಚೆಗೆ ಮರಳಿ ಬಂದಿದ್ದು ಈ ಬಗ್ಗೆ ತಿಳಿದ ಆದೂರು ಪೊಲೀಸರು ಆರೋಪಿಂiiನ್ನು ಬಂಧಿಸಿದ್ದಾರೆ.