ಗೆಳೆಯರೊಂದಿಗೆ ಕೊಳದಲ್ಲಿ ಈಜುತ್ತಿದ್ದಾಗ ಮುಳುಗಿ ಯುವಕ ಮೃತ್ಯು

ಹೊಸದುರ್ಗ: ಗೆಳೆಯರೊಂದಿಗೆ ಕೊಳದಲ್ಲಿ ಸ್ನಾನ ಮಾಡುತ್ತಿದ್ದಾಗ ಯುವಕ ಮುಳುಗಿ ಮೃತಪಟ್ಟರು. ಇಡುಕ್ಕಿ ಚೆರುತೋಣಿ ನಿವಾಸಿ ರೆಜಿ ಎಂಬವರ ಪುತ್ರ ಅಖಿಲ್ ಅಗಸ್ಟಿನ್ (22) ಮೃತಪಟ್ಟ ಯುವಕ. ನಿನ್ನೆ ಸಂಜೆ 5.30ರ ವೇಳೆ ಕರಿವೆಳ್ಳೂರು ವಡಕ್ಕೇ ಮಣಕ್ಕಾಟ್‌ನ ಗೆಳೆಯನ ಮನೆಗೆ ಈತ ತಲುಪಿದ್ದರು. ನಾಲ್ಕು ಮಂದಿ ಗೆಳೆಯರೊಂದಿಗೆ ಕೊಳದಲ್ಲಿ ಈಜುತ್ತಿದ್ದ ಮಧ್ಯೆ ಅಖಿಲ್ ಮುಳುಗಿದ್ದಾರೆ. ಈ ವೇಳೆ ಪರಿಸರದಲ್ಲಿದ್ದವರು ರಕ್ಷಣಾ ಚಟುವಟಿಕೆ ನಡೆಸಿದರಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಪರಿಯಾರಂ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮಾಹಿತಿ ತಿಳಿದು ಪಯ್ಯನ್ನೂರು ಪೊಲೀಸರು ಸ್ಥಳಕ್ಕೆ ತಲುಪಿದ್ದರು. ಬೆಂಗಳೂರಿನಲ್ಲಿ ಬಿಬಿಎ ಶಿಕ್ಷಣ ಪೂರೈಸಿದ ಬಳಿಕ ಕಳೆದ ವಾರ ಅಖಿಲ್‌ಗೆ ಕೆಲಸ ಲಭಿಸಿತ್ತು.

You cannot copy contents of this page