ಗ್ಯಾಸ್ ಏಜೆನ್ಸಿ ಅಂಗಡಿಯಿಂದ 2.95 ಲಕ್ಷರೂ. ಕಳವು
ಕಾಸರಗೋಡು: ಕಾಸರಗೋಡು ನಗರದ ಹಳೆ ಪ್ರೆಸ್‌ಕ್ಲಬ್ ಜಂಕ್ಷನ್ ಬಳಿ ಕಾರ್ಯವೆಸಗುತ್ತಿರುವ ಭಾರತ್ ಗ್ಯಾಸ್ ಏಜೆನ್ಸಿ ಕಚೇರಿಗೆ ಕಳ್ಳರು ನುಗ್ಗಿ 2,95,360 ರೂ. ಕಳವುಗೈದಿದ್ದಾರೆ.
ತಳಂಗರೆ ನಿವಾಸಿ ಆಯಿಷ ಎಂಬವರು ಗ್ಯಾಸ್ ಏಜೆನ್ಸಿಯನ್ನು ನಡೆಸುತ್ತಿದ್ದು ಆ ಬಗ್ಗೆ ಅವರು ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ಸಂಸ್ಥೆ ಮಾಲಕರು ಬೆಳಿಗ್ಗೆ ಬಾಗಿಲು ತೆರೆದಾಗಲೇ ಕಳವು ನಡೆದ ವಿಷಯ ಗಮನಕ್ಕೆ ಬಂದಿದೆ.
ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಅಲ್ಲಿಂದ ಹಲವು ಬೆರಳಚ್ಚುಗಳನ್ನು ಸಂಗ್ರಹಿಸಿದ್ದಾರೆ. ಕಳ್ಳರ ಪತ್ತೆಗಾಗಿ ಆ ಪರಿಸರದ ಸಿಸಿ ಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದು, ಅದರಲ್ಲಿ ಪೊಲೀಸರಿಗೆ ಕೆಲವೊಂದು ಮಾಹಿತಿ ಲಭಿಸಿದೆ ಎನ್ನಲಾಗಿದೆ.