ಚಂದ್ರಗಿರಿ ಸೇತುವೆಯಿಂದ ಹೊಳೆಗೆ ಹಾರಿದ ಮುಳ್ಳೇರಿಯದ ಯುವಕ: ಮೀನುಗಾರರಿಂದ ರಕ್ಷಣೆ

ಕಾಸರಗೋಡು: ಚಂದ್ರಗಿರಿ ಸೇತುವೆ ಯಿಂದ ಹೊಳೆಗೆ ಹಾರಿ ಮುಳ್ಳೇರಿಯದ ಯುವಕನೋರ್ವ ಆತ್ಮಹತ್ಯೆಗೈಯ್ಯ ಲೆತ್ನಿಸಿ ಅದನ್ನು ಕಂಡ ಮೀನುಗಾರರಿ ಬ್ಬರು ಸೇರಿ ಆತನನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ ಘಟನೆ ನಿನ್ನೆ ನಡೆದಿದೆ.

ನಿನ್ನೆ ಮಧ್ಯಾಹ್ನ  ಸುಮಾರು ೨ ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಬೈಕ್‌ನಲ್ಲಿ ಬಂದ ಮುಳ್ಳೇರಿಯ ನಿವಾಸಿಯಾದ ಯುವಕ ತನ್ನ ಬೈಕ್   ಸೇತುವೆಯಲ್ಲಿ ನಿಲ್ಲಿಸಿ ತನ್ನ ಪರ್ಸ್,ಮೊಬೈಲ್ ಫೋನ್ ಬೈಕ್‌ನ ಮೇಲೆ ಇರಿಸಿ ಸೇತುವೆಯ ಮಧ್ಯ ಭಾಗದಿಂದ ಹೊಳೆಗೆ ಹಾರಿದ್ದಾನೆ. ಅದನ್ನು ಕಂಡ ಹೊಳೆಯಲ್ಲಿ ಕಿರು ದೋಣಿಯಲ್ಲಿ ಮೀನು ಹಿಡಿಯುತ್ತಿದ್ದ ಚೆಮ್ನಾಡ್‌ನ ಸಲೀಂ ಮತ್ತು ಮೊಹ ಮ್ಮದ್ ರೈಮು ತಕ್ಷಣ ಹೊಳೆಗೆ ಧುಮುಕಿ ನೀರಿನಲ್ಲಿ ಜೀವನ್ಮರಣ ಹೋರಾಟದಲ್ಲಿದ್ದ ಯುವಕನನ್ನು ನೀರಿನಿಂದ ಮೇಲಕ್ಕೆತ್ತಿ ತಮ್ಮ ದೋಣಿಯಲ್ಲಿ ದಡಕ್ಕೆ ಸಾಗಿಸಿದ್ದಾರೆ. ಆಗ ಆ ಯುವಕ ಪದೇ ಪದೇ ವಾಂತಿ ಮಾಡತೊಡಗಿದನು. ನಂತರ ಆತನನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಕಣ್ಣೂರಿನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತು.

ನಾನು ಮಂಗಳೂರಿನ ಆಸ್ಪತ್ರೆ ಯೊಂದರಲ್ಲಿ ಚಿಕಿತ್ಸೆಯಲ್ಲಿದ್ದೆನೆಂದೂ ನಾನು ಹೊಳೆಗೆ ಹಾರಿದ ವಿಷಯ ವನ್ನು ನನ್ನ ಮನೆಯವರಿಗೆ ತಿಳಿಸಬಾ ರದೆಂದು ಆ ಯುವಕ ನಮ್ಮಲ್ಲಿ ತಿಳಿಸಿ ದ್ದನೆಂದು ಆತನನ್ನು ರಕ್ಷಿಸಿದ  ಸಲೀಂ ತಿಳಿಸಿದ್ದಾರೆ. ಆತನನ್ನು ರಕ್ಷಿಸಿದ ಬಳಿಕ ಆ ವಿಷಯವನ್ನು ನಾವು ಕಾಸರಗೋಡು ಪೊಲೀಸರು  ಮತ್ತು ಯುವಕನ ಸಂಬಂಧಿಕರಿಗೆ ತಿಳಿಸಿರು ವುದಾಗಿ ಎಂದು  ಸಲೀಂ ಮತ್ತು ಮೊಹಮ್ಮದ್ ರೈಮು ತಿಳಿಸಿದ್ದಾರೆ.

ಹೀಗೆ ಹೊಳೆಗೆ ಹಾರಿದ ಹಲವರನ್ನು ಸಲೀಂ ನೇತೃತ್ವದಲ್ಲಿ ಈ ಹಿಂದೆಯೂ ರಕ್ಷಿಸಲಾಗಿತ್ತು.

RELATED NEWS

You cannot copy contents of this page