ಚಿನ್ನದ ದರದಲ್ಲಿ ಮತ್ತೆ ದಾಖಲೆ

ಕಾಸರಗೋಡು: ರಾಜ್ಯದಲ್ಲಿ ಚಿನ್ನದ ದರ ಪ್ರತಿದಿನ ಮೇಲಕ್ಕೇರು ತ್ತಿದ್ದು, ಸಾರ್ವತ್ರಿಕ ದಾಖಲೆಯತ್ತ  ಸಾಗಿದೆ. ಇಂದು ಒಂದು ಪವನ್ ಚಿನ್ನದ ದರ 52,520 ರೂ.ಗೆ ತಲುಪಿದೆ. ಒಂದು ಗ್ರಾಂಗೆ 6565 ರೂಪಾಯಿಯಂತೆ ಇಂದಿನ ವ್ಯಾಪಾರ ನಡೆಯುತ್ತಿದೆ. ಕಳೆದ ಶುಕ್ರವಾರ ಒಂದು ಪವನ್‌ಗೆ 51,320 ರೂ. (1 ಗ್ರಾಂ ಗೆ 6415 ರೂ.) ಆಗಿತ್ತು. ಶನಿವಾರ ಅದು ಪವನ್‌ಗೆ 52,280 ರೂಪಾಯಿ (1 ಗ್ರಾಂಗೆ 6535) ಆಗಿತ್ತು. ಆ ಮೊತ್ತ ಇಂದು  ಮತ್ತೆ ಏರಿಕೆಯಾಗಿದೆ. ಚಿನ್ನಕ್ಕೆ ಇಷ್ಟು  ದರ ಏರಿಕೆಯಾಗುವುದು ಇದು ಇತಿಹಾಸದಲ್ಲೇ ಮೊದಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ  ಚಿನ್ನಕ್ಕೆ ದರ ಏರಿಕೆಯಾಗಿರುವುದೇ ಇಲ್ಲಿಯೂ ಬೆಲೆ ಹೆಚ್ಚಲು ಕಾರಣವೆಂದು ಹೇಳಲಾಗುತ್ತಿದೆ.

You cannot copy contents of this page