ಚಿನ್ನಾಭರಣ ನಿರ್ಮಾಣ ಕೇಂದ್ರಗಳಲ್ಲಿ ಜಿಎಸ್‌ಟಿ ದಾಳಿ: 120 ಕಿಲೋ ಚಿನ್ನ ವಶ
ತೃಶೂರು: ತೃಶೂರ್‌ನ ಚಿನ್ನಾಭರಣ ಕೇಂದ್ರಗಳಲ್ಲೂ, ಅಂಗಡಿಗಳಲ್ಲೂ ಜಿಎಸ್‌ಟಿ ಇಂಟೆಲಿಜನ್ಸ್ ದಾಳಿ ನಡೆಸಿದೆ. ಲೆಕ್ಕಕ್ಕೆ ಒಳಪಡದ 120 ಕಿಲೋ ಚಿನ್ನ ವಶಪಡಿಸಲಾಗಿದೆ. ರಾಜ್ಯದ ಜಿಎಸ್‌ಟಿ ಇಂಟೆಲಿಜೆನ್ಸ್ ಡೆಪ್ಯುಟಿ ಕಮಿಶನರ್ ದಿನೇಶ್ ಕುಮಾರ್‌ರ ನಿರ್ದೇಶದಂತೆ ದಾಳಿ ನಡೆಸಲಾಗಿದೆ. ಐದು ವರ್ಷದ ತೆರಿಗೆ ವಂಚನೆ ಪತ್ತೆಗಾಗಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಇದುವರೆಗೆ ನಡೆಸಿರುವುದರಲ್ಲೇ ಅತ್ಯಂತ ದೊಡ್ಡ ಜಿಎಸ್‌ಟಿ ದಾಳಿ ಇದಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ೭೦೦ಕ್ಕೂ ಅಧಿಕ ಉದ್ಯೋಗಸ್ಥರು ದಾಳಿಯಲ್ಲಿ ಭಾಗವಹಿಸುತ್ತಿದ್ದಾರೆ. ಸ್ಪೆಷಲ್ ಕಮಿಷನರ್ ಅಬ್ರಹಾಂ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಆಪರೇಶನ್ ‘ಟೊರೋಡೆಲ್ ಓರೊ’ ಎಂಬ ಹೆಸರು ಈ ದಾಳಿಗೆ ಇರಿಸಲಾಗಿದೆ. ಅನಿರೀಕ್ಷಿತವಾಗಿ ಜಿಎಸ್‌ಟಿ ಅಧಿಕಾರಿಗಳು ತಪಾಸಣೆಗೆ ತಲುಪಿದ ಹಿನ್ನೆಲೆಯಲ್ಲಿ ಹಲವು ಅಂಗಡಿ ಮಾಲಕರಿಗೆ ಆತಂಕ ಸೃಷ್ಟಿಯಾಗಿತ್ತು.