ಚೀಮೇನಿ ತೆರೆದ ಜೈಲಿನಲ್ಲಿ ಮೊಬೈಲ್ ಪತ್ತೆ: ಇಬ್ಬರು ಖೈದಿಗಳ ವಿರುದ್ಧ ಕೇಸು
ಕಾಸರಗೋಡು: ಚೀಮೇನಿ ತೆರೆದ ಜೈಲಿನಲ್ಲಿ ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ಎರಡು ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿ ವಶಪಡಿಸಿ ದ್ದಾರೆ. ಜೈಲ್ ಸುಪರಿಂಟೆಂಡೆಂಟ್ ಕೆ.ಸಿ. ಅನ್ಸಾರ್ ನೀಡಿದ ದೂರಿನಂತೆ ಇಬ್ಬರು ಖೈದಿಗಳ ವಿರುದ್ಧ ಚೀಮೇನಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಬಾಬು, ಅರುಣ್ ಪಿಲಿಪ್ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇವರಿಬ್ಬರನ್ನೂ ಕಣ್ಣೂರು ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಗಿದೆ. ಫೋನ್ ಜೈಲಿಗೆ ತಲುಪಿಸಿದ್ದು ಯಾರೆಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.