ಚುನಾವಣೆಯಲ್ಲಿ ಸೋಲು: ಸರಕಾರದ ಆಡಳಿತ ರೀತಿಯಲ್ಲಿ ಬದಲಾವಣೆ ಬೇಕೆಂದು ತೀರ್ಮಾನಿಸಲು ಸಿಪಿಎಂ ನಾಯಕತ್ವ ಸಭೆ
ತಿರುವನಂತಪುರ: ಚುನಾವಣೆಯಲ್ಲಿ ಸೋಲುಂಟಾದ ಹಿನ್ನೆಲೆಯಲ್ಲಿ ಸಿಪಿಎಂ ಹಾಗೂ ಎಡರಂಗದಲ್ಲಿ ಚರ್ಚೆಗೆ ವೇದಿಕೆ ಸಿದ್ಧವಾಗುತ್ತಿದೆ. ಸರಕಾರದ ಗುಣಮಟ್ಟ ಹೆಚ್ಚಿಸಲು ಹಾಗೂ ಮುಖ್ಯಮಂತ್ರಿ ಮತ್ತು ಪಕ್ಷದಲ್ಲಿ ತಿದ್ದುಪಡಿ ಉಂಟಾಗಬಹುದೆಂದು ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಸ್ಪಷ್ಟಪಡಿಸಿದ್ದಾರೆ. ಚುನಾವಣೆಯ ಸೋಲಿನ ಬಗ್ಗೆ ಚರ್ಚಿಸಲು ಈ ತಿಂಗಳ 16ರಿಂದ ಐದು ದಿನದ ನಾಯಕತ್ವ ಸಭೆ ನಡೆಸಲು ಸಿಪಿಎಂ ತೀರ್ಮಾನಿಸಿದೆ. ಇದೇ ವೇಳೆ ಸಿಪಿಐ ಕಾರ್ಯನಿರತ ಸಮಿತಿ 10ರಂದು ಸಭೆ ಸೇರಲಿದೆ.
ಆರು ತಿಂಗಳಿಂದ ಲೋಕಸಭಾ ಚುನಾವಣೆಯ ಸಿದ್ಧತೆಯಲ್ಲಾಗಿತ್ತು ಸಿಪಿಎಂ. ನವಕೇರಳ ಸದಸ್ ಮೂಲಕ ಸರಕಾರದ ವತಿಯಿಂದ ಪ್ರಚಾರ ಶೈಲಿಯನ್ನು ರೂಪಿಸಲಾಗಿತ್ತು. 12 ಕ್ಷೇತ್ರಗಳಲ್ಲಿ ಗೆಲುವು ನಿರೀಕ್ಷಿಸಲಾಗಿದೆ. ಹೆಚ್ಚಿನೆಲ್ಲಾ ಕ್ಷೇತ್ರಗಳಲ್ಲೂ ಜಯ ಗಳಿಸಲು ಸಾಧ್ಯತೆ ಇದೆ ಎಂದು ಸಿಪಿಐ ಕೂಡಾ ನಿರೀಕ್ಷೆ ಹೊಂದಿತ್ತು. ಆದರೆ ಅದೆಲ್ಲಾ ಹುಸಿಯಾಗಿದೆ. ಸರಕಾರದ ಚಟುವಟಿಕೆಯನ್ನು ಉತ್ತಮಪಡಿಸಲು, ಮುಖ್ಯಮಂತ್ರಿಯ ಶೈಲಿಯನ್ನು ಬದಲಾಯಿಸಲೇಬೇಕು ಎಂಬ ಚಿಂತೆ ಪಕ್ಷದಲ್ಲಿ ಹಾಗೂ ಮೈತ್ರಿ ಪಕ್ಷಗಳಲ್ಲಿ ತೀವ್ರಗೊಂಡಿದೆ.
ಸರಕಾರದ ಆಡಳಿತ ರೀತಿಯನ್ನು ಸಿಪಿಎಂ ರಾಜ್ಯ ಸಮಿತಿ ಎರಡು ಬಾರಿ ವಿಮರ್ಷೆ ನಡೆಸಿದಾಗಲೂ ಸಚಿವರ ವಿರುದ್ಧ ಟೀಕೆ ಮೂಡಿ ಬಂದಿತ್ತು. ಹಿನ್ನೆಲೆಯಲ್ಲಿ ಸರಕಾರದ ಆಡಳಿತ ರೀತಿಯನ್ನು ಬದಲಿಸಲು ಸಿದ್ಧವೆಂದು ಮುಖ್ಯಮಂತ್ರಿ ಸೂಚಿಸಿದ್ದಾರೆ.