ಹೋಟೆಲ್ ಮಾಲಕ ನಿಧನ

ಮಂಜೇಶ್ವರ: ಹಿರಿಯ ಹೋಟೆಲ್ ಉದ್ಯಮಿ, ಹೊಸಂಗಡಿ ಪೆಲಪಾಡಿ ನಿವಾಸಿ ಬಿ.ಎಂ. ಮಾಧವ ಸಂಗಂ (74) ಸ್ವ-ಗೃಹದಲ್ಲಿ ನಿಧನ ಹೊಂದಿದರು. ಈ ಹಿಂದೆ ಹೊಸಂಗಡಿ ಪೇಟೆಯಲ್ಲಿ ಸಂಗಂ ಹೋಟೆಲ್ ನಡೆಸುತ್ತಿದ್ದರು. ಸಿಪಿಎಂ ಮಂಜೇಶ್ವರ ಲೋಕಲ್ ಸಮಿತಿ ಸದಸ್ಯನಾಗಿದ್ದರು. ಕನಿಲ ಶ್ರೀ ಭಗವತೀ ಕ್ಷೇತ್ರದ ಬ್ರಹ್ಮಕಲಶ ಸಮಿತಿ, ಮಂಜೇಶ್ವರ ಕೋಟಗಂ ಬಂಗೇರ ತರ ವಾಡಿನ ಗೌರವ ಸಲಹೆಗಾರ, ರಾಮತ್ತ ಮಜಲ್ ರುದ್ರಭೂಮಿ ಅಭಿವೃದ್ಧಿ ಸಮಿತಿ ಮೊದಲಾದವುಗಳಲ್ಲಿ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ ವೇದಾವತಿ, ಮಕ್ಕಳಾದ ವಿನಯ ಕುಮಾರ್, ಸಂತೋಷ್, ಸಂದೀಪ್, ಚೇತನ ಕುಮಾರಿ, ಸೊಸೆ ಸುನಿತಾ ವಿನಯ್, ಸಹೋದರಿ ಲೀಲಾವತಿ, ಸಹೋದರ ದೇವರಾಜ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ವಿವಿಧ ರಾಜಕೀಯ ನೇತಾರರು ಭೇಟಿ ನೀಡಿ ಸಂತಾಪ ಸೂಚಿಸಿದರು.

RELATED NEWS

You cannot copy contents of this page