ಜಾನುವಾರುಗಳಿಗೆ ವಿಮಾ ಯೋಜನೆ: ಮೃಗಾಸ್ಪತ್ರೆ ಸಂಪರ್ಕಿಸಲು ಕರೆ
ಕಾಸರಗೋಡು: ಗೋ ಸಮೃದ್ಧಿ ಎನ್ಎಲ್ಎಂ ಯೋಜನೆಗಳಲ್ಲಿ ಸೇರಿಸಿ ಜಿಲ್ಲೆಯಲ್ಲಿ ಜಾನುವಾರು ಗಳಿಗೆ ವಿಮೆ ಯೋಜನೆ ಈ ತಿಂಗಳಲ್ಲಿ ಜ್ಯಾರಿಗೊಳಿಸಲಾಗುವುದು. ಯೋಜನೆಯಲ್ಲಿ ದನದ ಮಾಲಕನಿಗೂ ಇನ್ಶೂರೆನ್ಸ್ ಸಂರಕ್ಷಣೆ ಲಭಿಸುವುದು. ಒಂದು ವರ್ಷ, ಮೂರು ವರ್ಷ ಎಂಬೀ ರೀತಿಯಲ್ಲಿರುವ ಕಾಲಾವಧಿಗೆ ವಿಮೆ ಮಾಡಬಹುದಾಗಿದೆ. 65,000 ರೂ.ವರೆಗಿನ ಮೌಲ್ಯದ ಏಳು ಲೀಟರ್ ಹಾಲು ಉತ್ಪಾದಿಸುವ, 2ರಿಂದ 10 ವರ್ಷದ ವರೆಗೆ ಪ್ರಾಯದ, ಗರ್ಭಾವಸ್ಥೆಯಲ್ಲಿರುವ ದನ, ಎಮ್ಮೆ ಮೊದಲಾದ ಜಾನುವಾರುಗಳನ್ನು ವಿಮೆ ಯೋಜನೆಯಲ್ಲಿ ಸೇರಿಸಬಹು ದಾಗಿದೆ. 1 ವರ್ಷಕ್ಕೆ 4.48 ಶೇಕಡಾ, 3 ವರ್ಷಕ್ಕೆ 10.98 ಶೇಕಡಾ ಪ್ರೀಮಿಯಂ ಮೊತ್ತವಾಗಿದೆ. ಇದರ ಅರ್ಧ ಸರಕಾರಿ ಸಬ್ಸಿಡಿಯಾಗಿ ಲಭಿಸುವುದು. ಕೃಷಿಕರು ಪಾವತಿಸ ಬೇಕಾದ ಮೊತ್ತದಲ್ಲಿ 100 ರೂ. ಕೇರಳ ಫೀಡ್ಸ್ ವಹಿಸುತ್ತದೆ. 1 ಲಕ್ಷಕ್ಕೆ 20 ರೂ. ಕೃಷಿಕರು 1 ವರ್ಷ ದ ಪ್ರೀಮಿಯಂ ಆಗಿ ಸಲ್ಲಿಸಬೇಕು. ಗರಿಷ್ಠ 5 ಲಕ್ಷ ರೂ. ಆಗಿದೆ. 18ರಿಂದ 70 ವರ್ಷದವರೆಗಿನ ಪ್ರಾಯದ ಕೃಷಿಕರಿಗೆ ಗರಿಷ್ಠ 5 ವರ್ಷಕ್ಕೆ ವಿಮೆ ಲಭಿಸುವುದು. ಜಿಲ್ಲಾ ಮಟ್ಟದಲ್ಲಿ ಮೃಗಾಸ್ಪತ್ರೆಗಳಿಗೆ ಮಂಜೂರು ಮಾಡಿರುವ ಪ್ರಮಾಣಕ್ಕನುಸಾರವಾಗಿ ಜಾನುವಾರುಗಳನ್ನು ವಿಮಾ ಯೋಜನೆಯಲ್ಲಿ ಸೇರಿಸಬಹುದಾಗಿದ್ದು, ಕೃಷಿಕರು ಮೃಗಾಸ್ಪತ್ರೆಗಳನ್ನು ಸಂಪರ್ಕಿಸಲು ಸಂಬAಧಪಟ್ಟವರು ತಿಳಿಸಿದ್ದಾರೆ.