ಜಾಮಿಯಾ ಸ ಅದಿಯಾ ಕ್ಯಾಂಪಸ್‌ಗೆ ಕಾನೂನು ಕಾಲೇಜು ಮಂಜೂರು: ಕಟ್ಟಡ ಶಿಲಾನ್ಯಾಸ ನಾಳೆ
ಕಾಸರಗೋಡು: ಕೋಳಿಯಡ್ಕ ದಲ್ಲಿ ಕಾರ್ಯವೆಸಗುತ್ತಿರುವ ಜಾಮಿಯಾ ಸಅದಿಯಾ ಕಾಲೇಜು ಕ್ಯಾಂಪಸ್‌ನಲ್ಲಿ ಐದು ವರ್ಷದ ಇಂಟಗ್ರೇಟೆಡ್ ಬಿಎ ಎಲ್‌ಎಲ್‌ಬಿ ಕಾನೂನು ಕಾಲೇಜು ಮಂಜೂರು ಮಾಡಲಾಗಿದೆ. ಪ್ರಥಮ ಬ್ಯಾಚ್‌ನಲ್ಲಿ ಒಟ್ಟು 60ಸೀಟುಗಳಿರಲಿವೆ. ಇದಕ್ಕಾಗಿ ನಿರ್ಮಿಸಲಿರುವ ಹೊಸ ಕಟ್ಟಡ ಜಾಮಿಯಾ ಸ ಅದಿಯಾ ಅಧ್ಯಕ್ಷ ಕೆ.ಎಸ್. ಆಟುಕೋಯ ತಂಙಳ್ ಕುಂಬೋಳ್ ನಾಳೆ ನಿರ್ವಹಿಸಲಿದ್ದಾರೆಂದು ಈ ಪ್ರಯುಕ್ತ ಕರೆದ ಪತ್ರಿಕಾಗೋಷ್ಠಿಯಲ್ಲಿ ಸಂಬಂಧಪಟ್ಟವರಾದ ಮಹಮ್ಮದಲಿ ಸಖಾಫಿ ತೃಕರಿಪುರ, ಬಿ.ಎಸ್. ಅಬ್ದುಲ್ಲ ಕುಂಞಿ ಫೈಸಿ, ಪಳ್ಳಂಗೋಡು ಅಬ್ದುಲ್ ಖಾದಿರ್ ಮದನಿ, ಹಾಜಿ ಅಬ್ದುಲ್ಲ ಹುಸೈನ್ ಕಡವತ್ತ್, ಕೊಲ್ಲಂಪಾಡಿ ಅಬ್ದುಲ್ ಖಾದಿರ್ ಸಹದಿ ಮತ್ತು ಪಿ.ವಿ. ಮುಸ್ತಫ ತಿಳಿಸಿದ್ದಾರೆ. ನಾಳೆ ನಡೆಯಲಿರುವ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಪ್ರೊಜೆಕ್ಟ್ ಲಾಂಚಿಂಗ್ ನಡೆಸುವರು. ಶಾಸಕರಾದ ಸಿ.ಎಚ್. ಕುಂಞಂಬು, ಎನ್.ಎ. ನೆಲ್ಲಿಕುನ್ನು, ಎಕೆಎಂ ಅಶ್ರಫ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು, ಕೇರಳ ಅಲ್ಪಸಂಖ್ಯಾತ ಆಯೋಗದ ಸದಸ್ಯ ಎ. ಸೈನುದ್ದೀನ್ ಹಾಜಿ ತಿರುವನಂತಪುರ, ಎ.ಪಿ. ಅಬ್ದುಲ್ಲ ಮುಸ್ಲಿಯಾರ್ ಮಾಣಿಕೋತ್ತ್, ಎನ್.ಎ. ಅಬೂಬಕರ್ ಹಾಜಿ ಮೊದಲಾದವರು ಮಾತನಾಡುವರು. ಆರ್ಟ್ಸ್ ಆಂಡ್ ಸಯನ್ಸ್ ಕಾಲೇಜಿನ ಅಧ್ಯಕ್ಷ ಡಾ. ಎನ್.ಎ. ಮೊಹಮ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.