ಜಿಲ್ಲಾ ಕೇರಳೋತ್ಸವ: ಅತ್ಲೆಟಿಕ್ ಮೀಟ್‌ನಲ್ಲಿ ಕಾರಡ್ಕ ಬ್ಲೋಕ್ ಚಾಂಪ್ಯನ್

ಕಾಸರಗೋಡು: ನೀಲೇಶ್ವರ ಇ.ಎಂ.ಎಸ್ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಕೇರಳೋತ್ಸವದ ಅತ್ಲೆಟಿಕ್ ಮೀಟ್‌ನಲ್ಲಿ ೧೬೪ ಅಂಕ ಪಡೆದು ಕಾರಡ್ಕ ಬ್ಲೋಕ್ ಪಂ. ಓವರೋಲ್ ಚಾಂಪ್ಯನ್ ಆಗಿದೆ. ೮೫ ಅಂಕ ಗಳಿಸಿದ ಮಂಜೇಶ್ವರ ಬ್ಲೋಕ್ ದ್ವಿತೀಯ ಸ್ಥಾನ ಪಡೆದಿದ್ದು, ೬೯ ಅಂಕದೊಂದಿಗೆ ಕಾಞಂಗಾಡ್ ಬ್ಲೋಕ್ ತೃತೀಯ ಸ್ಥಾನ ಗಳಿಸಿದೆ.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿ ದರು. ಜಿಲ್ಲಾ ಪಂ. ಸದಸ್ಯ ಸಿ.ಜೆ. ಸಜಿತ್ ಅಧ್ಯಕ್ಷತೆ ವಹಿಸದರು. ನೀಲೇಶ್ವರ ಬ್ಲೋಕ್ ಪಂ. ಅಧ್ಯಕ್ಷ ಮಾಧವನ್ ಮಣಿಯಾರ, ಜಿಲ್ಲಾ ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ಕೆ. ಶಕುಂತಳಾ, ಜಿಲ್ಲಾ ಸ್ಪೋರ್ಟ್ಸ್ ಕೌನ್ಸಿಲ್ ಸದಸ್ಯರಾದ ಅನಿಲ್ ಬಂಗಳಂ, ಟಿ.ವಿ. ಕೃಷ್ಣನ್, ಜಿಲ್ಲಾ ಯೂತ್ ಕೋ-ಆರ್ಡಿನೇಟರ್ ಎ.ವಿ. ಶಿವಪ್ರಸಾದ್ ಮಾತನಾಡಿ ದರು. ಸಮಾರೋಪ ಸಮಾರಂಭವನ್ನು ಕಾಞಂಗಾಡ್ ಬ್ಲೋಕ್ ಪಂ. ಅಧ್ಯಕ್ಷ ಕೆ. ಮಣಿಕಂಠನ್ ಉದ್ಘಾಟಿಸಿದರು. ಪಿ.ಪಿ. ಅಶೋಕನ್ ಅಧ್ಯಕ್ಷತೆ ವಹಿಸಿದರು. ನಾಲ್ಕು ವಿಭಾಗಗಳಲ್ಲಾಗಿ ೫೨ ಸ್ಪರ್ಧೆಗಳಲ್ಲಿ ೮೫೦ ಕ್ರೀಡಾತಾರೆಗಳು ಭಾಗವಹಿಸಿದರು. ವೈಯಕ್ತಿಕ ಸಾಧನೆ ಮಾಡಿದವರು ಮಹಿಳಾ ವಿಭಾಗ ಕೆ. ಹರ್ಷಿತ (ಕಾರಡ್ಕ ಬ್ಲೋಕ್), ಸೀನಿಯರ್ ಹೆಣ್ಣು ಮಕ್ಕಳ ವಿಭಾಗ ಎಂ.ಆರ್.ವೃಕ್ಷ (ಮಂಜೇಶ್ವರ ಬ್ಲೋಕ್), ಪುರುಷ ವಿಭಾಗ ಎನ್.ಕೆ. ಅಸಾರ್ (ಕಾಞಂಗಾಡ್ ಬ್ಲೋಕ್), ಸೀನಿಯರ್ ಗಂಡು ಮಕ್ಕಳ ವಿಭಾಗ ಹಸನ್ ಶಮ್ಮಾಸ್ (ಮಂಜೇಶ್ವರ ಬ್ಲೋಕ್). ಪುರುಷ ವಿಭಾಗ ೧೫೦೦, ೫೦೦೦ ಮೀಟರ್ ಓಟದಲ್ಲಿ ಪೈಂಟಿಂಗ್ ಕಾರ್ಮಿಕನಾದ ಕಾರಡ್ಕ ಕೊಟ್ಟಂಗುಳಿಯ ಕೆ. ಪ್ರಜೀಶ್ ಪ್ರಥಮ ಸ್ಥಾನ ಪಡೆದಿದ್ದಾರೆ. 

Leave a Reply

Your email address will not be published. Required fields are marked *

You cannot copy content of this page