ಜಿಲ್ಲಾ ಪೊಲೀಸ್ ಅಸೋಸಿಯೇಶನ್ ಸಮಾವೇಶ ಸಮಾಪ್ತಿ: ಕರ್ತವ್ಯ ನಿರತ ವೇಳೆ ಆಕ್ರಮಣಕ್ಕೆ ತುತ್ತಾಗುವ ಪೊಲೀಸರ ರಕ್ಷಣೆಗೆ ಆಗ್ರಹ

ಕಾಸರಗೋಡು: ಪೊಲೀಸ್ ಅಸೋಸಿಯೇಶನ್ ಜಿಲ್ಲಾ ಸಮಾವೇಶ ಕಾಸರಗೋಡು ಹೊಸ ಬಸ್ ನಿಲ್ದಾಣ ಸಮೀಪದ ಸಭಾಂಗಣದಲ್ಲಿ ಜರಗಿತು. ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿ ದರು. ಎಸ್.ಪಿ ಬಿ.ವಿ. ವಿಜಯ್ ಭಾರತ್ ರೆಡ್ಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಸಂಘಟನೆಯ ಜಿಲ್ಲಾ ಅಧ್ಯಕ್ಷ ಬಿ. ರಾಜ್ ಕುಮಾರ್ ಧ್ವಜಾ ರೋಹಣಗೈದರು. ಸಭೆಯಲ್ಲಿ ಅಧ್ಯಕ್ಷತೆ ವಹಿಸಿದರು,  ಹುತಾತ್ಮ ಮಂಟಪದಲ್ಲಿ ಪುಷ್ಪಾರ್ಚನೆ ನಡೆಸಲಾಯಿತು. ಹೆಚ್ಚುವರಿ ಎಸ್‌ಪಿ ಪಿ. ಬಾಲಕೃಷ್ಣನ್ ನಾಯರ್, ಸಿ.ಕೆ. ಸುನಿಲ್ ಕುಮಾರ್, ಇ.ವಿ. ಪ್ರದೀಪನ್, ಪಿ.ಪಿ. ಮಹೇಶ್, ಪಿ. ರವೀಂದ್ರನ್, ಟಿ. ಗಿರೀಶ್ ಬಾಬು, ಎಂ. ಸದಾಶಿವನ್, ಪಿ. ಪ್ರಕಾಶನ್, ಪಿ.ಪಿ. ಅಮಲ್‌ದೇವ್ ಶುಭ ಕೋರಿ ದರು. ಟಿ.ವಿ. ಪ್ರಮೋದ್ ಸಂತಾಪ ಠರಾವು, ಎ. ಸುಧೀರ್ ಖಾನ್ ವರದಿ, ಎ.ಪಿ. ಸುರೇಶ್ ಚಟುವಟಿಕಾ ವರದಿ, ಪಿ.ವಿ. ಸುಧೀಶ್ ಆಯ-ವ್ಯಯ ಲೆಕ್ಕ, ಕೆ. ಅಜಿತ್ ಕುಮಾರ್, ವಿ.ವಿ. ಉಮೇ ಶ್ ವಿವಿಧ ವರದಿ ಮಂಡಿಸಿದರು. ಕೆ. ಸುರೇಶ್ ಕುಮಾರ್ ಸ್ವಾಗತಿಸಿ, ಚಂದ್ರ ಶೇಖರ್ ವಂದಿಸಿದರು. ಕರ್ತವ್ಯ ಮಧ್ಯೆ ಆಕ್ರಮಣಕ್ಕೆ ತುತ್ತಾಗುವ ಪೊಲೀ ಸರ ಸಂರಕ್ಷಣೆ ಚಿಕಿತ್ಸಾ ವೆಚ್ಚ ಸಂಪೂರ್ಣವಾಗಿ ಸರಕಾರ ವಹಿಸಿ ಕೊಳ್ಳಬೇಕೆಂದು ಸಮಾವೇಶದಲ್ಲಿ ಆಗ್ರಹಿಸಲಾಯಿತು.

You cannot copy contents of this page