ಜಿಲ್ಲಾ ಶಾಲಾ ಕಲೋತ್ಸವಕ್ಕೆ ಉದಿನೂರಿನಲ್ಲಿ ಚಾಲನೆ

ಹೊಸದುರ್ಗ: ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ಉದಿನೂರು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇಂದು ಬೆಳಿಗ್ಗೆ  ಆರಂಭಗೊಂಡಿದೆ. ಇದರಂತೆ ಇಂದು ಮತ್ತು ನಾಳೆ ವೇದಿಕೇತರ ಸ್ಪರ್ಧೆಗಳು ನಡೆಯಲಿದೆ. ನ. ೨೮ರಿಂದ ೩೦ರ ತನಕ  ವೇದಿಕೆ ಸ್ಪರ್ಧೆಗಳು ನಡೆಯ ಲಿದೆ. ಕಲೋತ್ಸವದ ಪ್ರಚಾರಕ್ಕಾಗಿ ನಿನ್ನೆ ಉದಿನೂರು ನಗರದಲ್ಲಿ ಡಂಗುರ ಜಾಥಾ ನಡೆಯಿತು.

೩೧೬ ವಿಭಾಗಗಳಲ್ಲಾಗಿ ವಿವಿಧ ವೇದಿಕೇತರ ಸ್ಪರ್ಧೆಗಳು ನಡೆಯ ಲಿದೆ. ಇದರಲ್ಲಿ ಕಾಸರಗೋಡು  ಕಂದಾಯ ಏಳು, ಉಪಜಿಲ್ಲೆಗಳ 229 ಶಾಲೆಗಳಿಂದಾಗಿ ೬೦೦೦ದಷ್ಟು ಪ್ರತಿಭೆಗಳು ಭಾಗವಹಿಸುವರು. ಶಿಕ್ಷಣ ಉಪ ನಿರ್ದೇಶಕ ವಿ. ಮಧುಸೂದನ್ ಇಂದು ಬೆಳಿಗ್ಗೆ ಧ್ವಜಾರೋಹಣಗೈಯ್ಯುವ ಮೂಲಕ ಕಲೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ನ. ೨೮ರಂದು ಸಂಜೆ ೪ ಗಂಟೆಗೆ ಮಲೆಯಾಳಂ ಸಿನಿಮಾ ನಟ ಹಾಗೂ ನಿರ್ದೇಶಕ ಮಧುಪಾಲ್ ವೇದಿಕೆ ಕಲಾ ಸ್ಪರ್ಧೆಗಳ ಉದ್ಘಾಟನೆ ನೆರವೇರಿಸುವರು. ನ. ೩೦ರಂದು ಸಂಜೆ ೪ ಗಂಟೆಗೆ ನಡೆಯುವ ಸಮಾರೋಪ ಸಮಾರಂಭವನ್ನು ರಾಜ್ಯ ಪ್ರಾಚ್ಯ ಇಲಾಖೆ ಸಚಿವ ರಾಮಚಂದ್ರನ್ ಕಡನ್ನಪಳ್ಳಿ ಉದ್ಘಾಟಿಸುವರು.

ವಿಜೇತರಿಗೆ ಬಹುಮಾನ ವಿತರಿಸುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಹಲವು ಗಣ್ಯರು ಭಾಗವಹಿಸಿ ಮಾತನಾಡುವರು.

Leave a Reply

Your email address will not be published. Required fields are marked *

You cannot copy content of this page