ಜಿಲ್ಲಾ ಶಾಲಾ ಕಲೋತ್ಸವ : ಸಿದ್ಧಗೊಂಡ ತುಳುನಾಡು ಉದಿನೂರು
ಹೊಸದುರ್ಗ: ಉದಿನೂರು ಸರ ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 26ರಿಂದ ನಡೆಯಲಿರುವ ಜಿಲ್ಲಾ ಶಾಲಾ ಕಲೋತ್ಸವಕ್ಕೆ ಸಿದ್ಧತೆ ಪೂರ್ಣ ಗೊಂಡಿದೆ. ಇದರಂಗವಾಗಿ ನಿನ್ನೆ ವಿದ್ಯಾ ರ್ಥಿಗಳ ಸೈಕಲ್ ರ‍್ಯಾಲಿ ನಡೆಯಿತು. ರ‍್ಯಾಲಿಯನ್ನು ಜಿ. ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು.
ಹಳೆಯ ತುಳುನಾಡಿನ ದಕ್ಷಿಣ ತುದಿಯಲ್ಲಿರುವ ಸಮುದ್ರತೀರ ಗ್ರಾಮವಾಗಿದೆ ಉದಿನೂರು. ಕೇರಳ ರೂಪೀಕರಣದ ಮೊದಲು ಮಲಯಾಳ ನಾಡು, ತಿರುವಿ ದಾಂಕೂರು ಕೊಚ್ಚಿ, ಮಲಬಾರ್ ಆಗಿದ್ದ ಸಮಯದಲ್ಲಿ ಉದಿನೂರು ತುಳುನಾಡಿನ ಭಾಗವಾಗಿತ್ತು. ಉದಿನೂರಿನಲ್ಲಿ ಭಾಷಪರವಾಗಿ ಈಗಲೂ ತುಳು ಶಬ್ದಗಳು ಕಂಡು ಬರುತ್ತಿವೆ. ಜಮೀನ್ದಾರಿಕೆಯ ಕಾಲ ಘಟ್ಟದಲ್ಲಿ ಬೀಜ ಬಿತ್ತಿದ ವನ್ನು ಕೊಯ್ಯುವನೆಂಬ ಘೋಷಣೆ ಯೊಂದಿಗೆ ಹೋರಾಟ ನಡೆಸಿದ ವೀರರಿದ್ದ ಮಣ್ಣಾಗಿದೆ ಇದು. ಜನಪರ ಕಲೆಯಾದ ನಾಟಕವನ್ನು ಇಲ್ಲಿನವರು ಹೃದಯದಲ್ಲಿಟ್ಟಿದ್ದಾರೆ. ಕಲೆ, ಶಿಕ್ಷಣ ಗುಣಮಟ್ಟ ಜಿಲ್ಲೆಯಲ್ಲೇ ಈ ಗ್ರಾಮ ಪ್ರಥಮ ಪಂಕ್ತಿಯಲ್ಲಿದೆ. ಈ ಗ್ರಾಮದಲ್ಲಿ ನಡೆಯಲು ಜಿಲ್ಲಾ ಶಾಲಾ ಕಲೋತ್ಸವವನ್ನು ಯಶಸ್ವಿಗೊಳಿಸಲು ಇಲ್ಲಿನವರು ಸಕಲ ಸಿದ್ಧತೆ ನಡೆಸಿದ್ದಾರೆ.