ಜೀವ ಕೈಯಲ್ಲಿ ಹಿಡಿದು ಹತ್ತಿದ್ದು ವಿದ್ಯುತ್ ಕಂಬ ಬೆಕ್ಕನ್ನು ಪಾರು ಮಾಡಿದ ಇಲೆಕ್ಟ್ರೀಶ್ಯನ್
ಕುಂಬಳೆ: ಜೀವ ಉಳಿಸಿಕೊಳ್ಳಲು ಬೇಕಾಗಿ ಓಡಿ ಹತ್ತಿದ ವಿದ್ಯುತ್ ಕಂಬದಿಂದ ಬೆಕ್ಕಿನ ಜೀವಹಾನಿ ಉಂಟಾಗುವ ಸಂದರ್ಭದಲ್ಲಿ ಸ್ಥಳೀಯ ಇಲೆಕ್ಟ್ರೀಶ್ಯನ್ ಒಬ್ಬರು ಬೆಕ್ಕನ್ನು ಸಂರಕ್ಷಿಸಿದ ಘಟನೆ ಕುಂಬಳೆಯಲ್ಲಿ ನಡೆದಿದೆ. ಬೀದಿ ನಾಯಿಗಳು ತಿರುಗಾಡುತ್ತಿರುವ ಪೇಟೆಯಲ್ಲಿ ಬೆಕ್ಕೊಂದನ್ನು ನಾಯಿ ಬೆನ್ನಟ್ಟಿದ್ದು, ಈ ವೇಳೆ ಬೆಕ್ಕು ವಿದ್ಯುತ್ ಕಂಬವೇರಿ ಕುಳಿತಿತ್ತು. ಇದನ್ನು ಕಂಡ ಕಡವತ್ ನಿವಾಸಿ ಇಲೆಕ್ಟ್ರೀಶ್ಯನ್ ಆರೀಫ್ ವಿದ್ಯುತ್ ಕಂಬದ ಫ್ಯೂಸ್ ತೆಗೆದು ಕಂಬವೇರಿ ಬೆಕ್ಕನ್ನು ಪಾರು ಮಾಡಿದ್ದಾರೆ. ಕುಂಬಳೆ ಮೀನು ಮಾರ್ಕೆಟ್ ರಸ್ತೆಯ ವಿದ್ಯುತ್ ಕಂಬಕ್ಕೆ ಬೆಕ್ಕು ಇಂದು ಬೆಳಿಗ್ಗೆ ಹತ್ತಿತ್ತು. ಬೆಕ್ಕನ್ನು ಸಂರಕ್ಷಿಸಿದ ಆರಿಫ್‌ರ ಕಾರ್ಯವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.