ಜುಗಾರಿ ಕೇಂದ್ರಕ್ಕೆ ಪೊಲೀಸ್ ದಾಳಿ: ಇಬ್ಬರ ಸೆರೆ, ಹಲವರು ಪರಾರಿ

ಕುಂಬಳೆ: ಕೊಯಿಪ್ಪಾಡಿ ಕಡಪ್ಪುರದಲ್ಲಿ ಜುಗಾರಿ ಕೇಂದ್ರಕ್ಕೆ ದಾಳಿ ನಡೆಸಿದ ಪೊಲೀಸರು  ಇಬ್ಬರನ್ನು ಬಂಧಿಸಿದ್ದಾರೆ. ಹಲವರು ಓಡಿ ಪರಾರಿಯಾಗಿದ್ದಾರೆ. ಬಂಧಿತರ ಕೈಯಿಂದ  10,100  ರೂ. ವಶಪಡಿಸಲಾಗಿದೆ. ಕೊಯಿಪ್ಪಾಡಿ ಕಡಪ್ಪುರದ ಮೊಹಮ್ಮದ್ ಕುಂಞಿ (55), ಕುಬಣೂರಿನ ಕಿರಣ್ (35) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ.   ನಿನ್ನೆ ಮುಂಜಾನೆ ಜುಗಾರಿ ದಂಧೆ ನಡೆಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಕುಂಬಳೆ ಎಸ್‌ಐ ಕೆ. ಶ್ರೀಜೇಶ್ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

RELATED NEWS

You cannot copy contents of this page