ಜೂನ್ 9ರಿಂದ ಟ್ರೋಲಿಂಗ್ ನಿಷೇಧ
ತಿರುವನಂತಪುರ: ಮಳೆಗಾಲ ಸಮುದ್ರದಲ್ಲಿ ಮೀನುಗಳ ಸಂತಾನೋ ತ್ಪತ್ತಿ ಋತುವಾಗಿರುವ ಹಿನ್ನೆಲೆಯಲ್ಲಿ ಅದನ್ನು ಸಂರಕ್ಷಿಸಲು ಪ್ರತೀ ವರ್ಷ ಏರ್ಪಡಿಸುವಂತೆ ಈ ವರ್ಷವೂ ಜೂನ್ 9ರಿಂದ ಕೇರಳದ ವ್ಯಾಪ್ತಿಗೊಳ ಪಟ್ಟ ಸಮುದ್ರ ಪ್ರದೇಶದಲ್ಲಿ ಮೀನುಗಾರಿಕೆ (ಟ್ರೋಲಿಂಗ್)ಗೆ ನಿಷೇಧ ಹೇರಲಾಗು ವುದೆಂದು ಮೀನುಗಾರಿಕಾ ಸಚಿವ ಸಜಿ ಚೆರಿಯಾನ್ ತಿಳಿಸಿದ್ದಾರೆ.
ಟ್ರೋಲಿಂಗ್ ನಿಷೇಧ ನಿಗದಿತ ಒಂದು ತಿಂಗಳ ತನಕ ಮುಂದುವರಿಯಲಿದೆ. ಟ್ರೋಲಿಂಗ್ ನಿಷೇಧ ಹೇರಲಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸಮುದ್ರ ಕರಾವಳಿ ಹೊಂದಿರುವ ಜಿಲ್ಲೆಗಳಲ್ಲಿ 24 ತಾಸುಗಳ ತನಕವೂ ಕಾರ್ಯವೆಸಗುವ ಕಂಟ್ರೋ ಲ್ ರೂಮ್ ತೆರೆಯಲಾಗುವುದೆಂದು ಸಚಿವರು ತಿಳಿಸಿದ್ದಾರೆ.